ಬಾಲಿವುಡ್ ವಿವಾದಿತ ತಾರೆ ರಾಕಿ ಸಾವಂತ್ ಇದೀಗ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಕರ್ನಾಟಕದ ಸೊಸೆಯಾಗಲು ಸಿದ್ಧತೆ ನಡೆಸಿರುವ ರಾಕಿ, ಸದ್ಯ ಬಾಯ್ ಫ್ರೆಂಡ್ ಮೈಸೂರಿನ ಹುಡುಗ ಆದಿಲ್ ಜೊತೆ ಟ್ರಾವೆಲಿಂಗ್, ಶಾಪಿಂಗ್ ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಆದಿಲ್ ಜೊತೆ ಅವರು ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು, ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದಾರೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
ಆದಿಲ್ ದುರ್ನಾನಿ ಅಭಿನಯದ ‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ್ ಲೈಂಗಿಕತೆಯ ಕುರಿತು ಕಥೆಯನ್ನು ಹೇಳಲಾಗಿದೆಯಂತೆ. ಅಲ್ಲದೇ, ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತೆ ಮೂಡಿಸಲಾಗಿದೆಯಂತೆ. ಈ ಸಿನಿಮಾವನ್ನು ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಿಕೊಂಡು ಬಂದ ರಾಕಿ, ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ಜನರ ಮನಸ್ಸು ವಿಚಿತ್ರವಾಗಿದೆ. ಮದ್ಯವನ್ನು ಕೊಳ್ಳಲು ಅವರು ತಾಸುಗಟ್ಟಲೇ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಕೊಳ್ಳಲು ಮುಜುಗರ ಪಡುತ್ತಾರೆ’ ಎಂದು ಆದಿಲ್ ನೋಡಿಕೊಂಡು ಹೇಳಿದ್ದಾರೆ.
ರಾಕಿ ಈ ಮಾತುಗಳನ್ನು ಆಡುತ್ತಿದ್ದಂತೆಯೇ ಆದಿಲ್ ಕಣ್ಣು ಮಿಟುಗಿಸದೇ ರಾಕಿಯನ್ನೇ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ರಾಕಿ ಯಾರಿಗೆ ಹೇಳುತ್ತಿದ್ದಾಳೆ ಎಂದು ತಿಳಿಯದೇ ಆದಿಲ್ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ. ನನಗೆ ರಾಕಿ ಹೇಳಿದಾಳಾ ಎನ್ನುವಂತೆ ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಂಡವರಂತೆ ಮುಖ ಮಾಡಿದ್ದಾರೆ. ಈ ವಿಡಿಯೋ ನೋಡಿದ ರಾಕಿ ಅಭಿಮಾನಿಗಳು ‘ಪಾಪ ಆದಿಲ್’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್
ಇಷ್ಟೇ ಅಲ್ಲದೇ, ತಾವು ಎಚ್.ಐ.ವಿ ಸೋಂಕಿತನನ್ನು ಭೇಟಿ ಮಾಡಿದ ಮತ್ತು ತಾವೇಕೆ ಕಾಂಡೋಮ್ ಬಳಸಲಿಲ್ಲ ಎಂದು ಪ್ರಶ್ನೆ ಮಾಡಿದ ವಿಚಾರವನ್ನೂ ಕ್ಯಾಮೆರಾ ಮುಂದೆ ರಾಕಿ ಸಾವಂತ್ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ಕೂಡ ಮುಜುಗರದಿಂದಾಗಿ ಏನೂ ಹೇಳಲಿಲ್ಲ ಎಂದಿದ್ದಾರೆ. ದಯವಿಟ್ಟು ಕಾಂಡೋಮ್ ಬಳಸಿ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಗಿಸಿದ್ದಾರೆ ರಾಕಿ.