BollywoodCinemaLatestMain PostNationalSandalwood

ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

ನ್ನಡ ಕಿರುತೆರೆ ನಟಿ ಚೇತನಾ ರಾಜ್ ಅವರು ಮೇ 16 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚೇತನಾ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದು, ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿದೆ. ಈ ಹಿನ್ನೆಲೆ ಚೇತನಾ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಿಣಾಮ ಸೆಲೆಬ್ರಿಟಿಗಳು ಚೇತನಾ ಸಾವಿಗೆ ಸಂತಾಪ ಸೂಚಿಸಿದರು. ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ಚೇತನಾ ಅವರ ಹಠಾತ್ ಸಾವಿನಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

ಇನ್‍ಸ್ಟಾದಲ್ಲಿ ರಾಖಿ, ಗೆಳೆಯರೇ, ಫ್ಯಾಟ್ ಸರ್ಜರಿಯಿಂದ ಸಾವನ್ನಪ್ಪಿದ ಕನ್ನಡ ನಟಿ ಚೇತನಾ ರಾಜ್ ಅವರ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಈ ರೀತಿ ಮಾಡುವ ಯಾವ ಆಸ್ಪತ್ರೆ ಮತ್ತು ವೈದ್ಯರಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ. ಆಕೆಗೆ ಯಾರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳವುದಕ್ಕೆ ಹೇಳಿದ್ದು. ಆ ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

ನಿಮಗೆ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಹೋಗಿದ್ರೆ, ಒಳ್ಳೆಯ ಬಾಲಿವುಡ್ ಜನರನ್ನು ಕೇಳಬೇಕು. ನೀವು ನನ್ನನ್ನು ಕೇಳಬೇಕು, ನೀವು ಯಾವ ವೈದ್ಯರ ಬಳಿಗೆ ಹೋಗಬೇಕು ಎಂದು ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಯಾರ ಬಳಿಯೂ ಹೋಗಿ ಈ ರೀತಿ ಸಾಯಬೇಡಿ. 21 ವರ್ಷದ ಹುಡುಗಿ ಯಾವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಚೇತನಾ ಸಾವಿಗೆ ಪ್ರಿಯಾಂಕಾ ಉಪೇಂದ್ರ, ಮೋಹಕ ತಾರೆ ರಮ್ಯಾ, ಚಂದನವನದ ಆಶ್ವಿತಿ ಶೆಟ್ಟಿ ಮರುಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button