ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಟ್ರೋಲ್‍ಗೊಳಗಾಗಿದ್ದಾರೆ.
ರಾಖಿ ಸಾವಂತ್ ಪಾಕಿಸ್ತಾನದ ಧ್ವಜ ಹಿಡಿದುಕೊಂಡಿರುವ ಫೋಟೋ ಹಾಕಿ ಅದಕ್ಕೆ, “ನನಗೆ ಭಾರತ ಅಂದರೆ ಇಷ್ಟ ಹಾಗೂ ನಾನು ಭಾರತ ದೇಶ ಪ್ರೀತಿಸುತ್ತೇನೆ. ಆದರೆ ಇದು ನನ್ನ ಸಿನಿಮಾ ‘ದಾರಾ 370’ ಚಿತ್ರದ ಪಾತ್ರ ಅಷ್ಟೇ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
I love my india ???????? but its my character in the film ???? dhara 370
Advertisement
ನಾನು ಜನರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನನಗೆ ಪಾಕಿಸ್ತಾನದ ಯುವತಿಯಾಗಿ ತೋರಿಸಿದ್ದಾರೆ. ಪಾಕಿಸ್ತಾನದ ಜನರು ಎದೆಯಲ್ಲೂ ಹೃದಯ ಇರುತ್ತದೆ. ಅವರು ತುಂಬಾ ಒಳ್ಳೆಯವರು. ಪಾಕಿಸ್ತಾನದಲ್ಲಿ ಎಲ್ಲರೂ ಕೆಟ್ಟವರಾಗಿ ಇರಲು ಸಾಧ್ಯವಿಲ್ಲ. ಕೆಲವರು ಮಕ್ಕಳಿಂದ ಜಿಹಾದ್ ಮಾಡಿಸುತ್ತಾರೆ. ಅವರು ತಮ್ಮ ದೇಶ ಹಾಗೂ ಅಲ್ಲಾನ ವಿರುದ್ಧವಾಗಿ ಈ ರೀತಿ ಕೆಲಸ ಮಾಡುತ್ತಾರೆ. ನಾನು ಪಾಕಿಸ್ತಾನವನ್ನು ಹಾಗೂ ಅಲ್ಲಿನ ಜನರನ್ನು ಗೌರವಿಸುತ್ತೇನೆ ಎಂದು ರಾಖಿ ವಿಡಿಯೋವೊಂದರಲ್ಲಿ ಹೇಳಿದ್ದಾರೆ.
Advertisement
View this post on Instagram
Advertisement
ಸದ್ಯ ರಾಖಿ ಸಾವಂತ್ ಫೋಟೋ ಹಾಗೂ ವಿಡಿಯೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೆ, “ನೀನು ಪಾಕಿಸ್ತಾನದ ಪ್ರಜೆ ಆಗಲು ಸೂಕ್ತ. ಮಿಸ್. ರಾಖಿ ಸಾವಂತ್ ಅಲ್ಲ ನೀನು ‘ಪಾಕಿಸ್ತಾನಿ’ ಸಾವಂತ್ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮತ್ತೆ ಕೆಲವರು ಹಣಕ್ಕಾಗಿ ನೀನು ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿದ್ದೀಯಾ?. ಇದು ಸರಿಯಲ್ಲ ರಾಖಿ ಎಂದು ಕಮೆಂಟ್ ಮಾಡಿದರೆ. ಮತ್ತೆ ಕೆಲವರು ಪಾಕಿಸ್ತಾನದ ಧ್ವಜ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ನಿನ್ನನ್ನು ಅನ್‍ಫಾಲೋ ಮಾಡುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.
View this post on Instagram