ತಾನು ಪ್ರೀತಿಸಿ ಮದುವೆಯಾದ ಹುಡುಗ ಆದಿಲ್ ಖಾನ್ ತಮಗೆ ಮೋಸ ಮಾಡುತ್ತಿದ್ದಾನೆ ಎಂದು ಮೊನ್ನೆಯಷ್ಟೇ ನಟಿ ರಾಖಿ ಸಾವಂತ್ ಕಣ್ಣೀರಿಟ್ಟಿದ್ದರು. ಅವನು ತನ್ನನ್ನು ಮದುವೆಯೇ ಆಗಿಲ್ಲವೆಂದು ಹೇಳುತ್ತಿದ್ದಾನೆ. ಅವನಿಂದ ನನಗೆ ಮೋಸ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ರಾಖಿ ಸಾವಂತ್ ನನ್ನೊಂದಿಗೆ ಮದುವೆ ಆಗಿದ್ದಾರೆ ಎಂದು ಸ್ವತಃ ಆದಿಲ್ ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆ ವಿವಾದ ಸರಿ ಹೋಗಿದೆ. ಹಾಗಾಗಿಯೇ ಕೇಸರಿ ಬಣ್ಣದ ಬುರ್ಖಾ ಧರಿಸಿ ಎಲ್ಲರಿಗೂ ವಂದನೆಗಳನ್ನು ಹೇಳಿದ್ದಾರೆ ರಾಖಿ.
Advertisement
ರಾಖಿ ಕಣ್ಣೀರು ಹಾಕುತ್ತಿದ್ದಂತೆಯೇ ಮದುವೆಯಾಗಿ ಆರು ತಿಂಗಳಿಗೆ ಈ ಮದುವೆ ಮುರಿದು ಬಿತ್ತು ಎಂದು ಹೇಳಲಾಗಿತ್ತು. ಆರು ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ರಿಜಿಸ್ಟರ್ ಮದುವೆ ಆಗಿದ್ದರು. ನಿಕಾ ಕೂಡ ಮಾಡಿಕೊಂಡಿದ್ದರು. ಆದರೆ, ತಮ್ಮ ಮದುವೆಯೇ ಆಗಿಲ್ಲ ಎಂದು ಆದಿಲ್ ಹೇಳುತ್ತಿದ್ದಾನೆ ಎಂದು ರಾಖಿ ರಂಪಾಟ ಮಾಡಿದ್ದರು. ಮದುವೆ ಆಗಿದ್ದರ ಗುರುತಾಗಿ ರಿಜಿಸ್ಟರ್ ಪತ್ರಗಳನ್ನೂ ಅವರು ಬಹಿರಂಗ ಪಡಿಸಿದ್ದರು. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ
Advertisement
Advertisement
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿದ್ದ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ರಾಖಿ ಹೇಳಿಕೊಂಡಿದ್ದರು.
Advertisement
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k