ಕಿರುತೆರೆಯ ಜನಪ್ರಿಯ ಶೋ ದೊಡ್ಮನೆ ಆಟಕ್ಕೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 11ರ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದರ ನಡುವೆ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ (Bigg Boss Marati 5) ರಾಖಿ ಸಾವಂತ್ (Rakhi Sawant) ಆಗಮಿಸಿದ್ದಾರೆ.
View this post on Instagram
ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ.
ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.