ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ರೀವಿಲಿಂಗ್ ಉಡುಪು(ದೇಹ ಕಾಣುವ ಉಡುಪು) ಧರಿಸಿ ಟ್ರೋಲ್ ಆಗಿದ್ದರು. ಟ್ರೋಲ್ ಆಗುತ್ತಿದ್ದಂತೆ ರಾಖಿ ನನ್ನ ಜೀವನ ಮುಗಿದು ಹೋಗಿದೆ ಎಂದು ಹೇಳುವ ಮೂಲಕ ವಿಡಿಯೋ ಮಾಡಿದ್ದಾರೆ.
ಇತ್ತೀಚೆಗೆ ರಾಖಿ ಸಾವಂತ್ ತಮ್ಮ ಹೊಸ ಐಟಂ ಸಾಂಗ್ ‘ಚಪ್ಪನ್ ಚೂರಿ’ ಹಾಡನ್ನು ಲಾಂಚ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ರಾಖಿ ಕಾರ್ಯಕ್ರಮದಲ್ಲಿ ರೀವಿಲಿಂಗ್ ಉಡುಪು(ದೇಹ ಕಾಣುವ ಉಡುಪು) ಧರಿಸಿದ್ದು, ಈ ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ರಾಖಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಟ್ರೋಲ್ ಆಗುತ್ತಿದ್ದಂತೆ ರಾಖಿ ಸಾವಂತ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಾಖಿ ಗಳಗಳನೇ ಅತ್ತಿದ್ದಾರೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ನನಗೆ ಡಿಸೈನರ್ ನೀಡಿದ ಆ ಉಡುಪು ಅಷ್ಟು ದೇಹ ಕಾಣುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆ ಉಡುಪಿನಿಂದಾಗಿ ನಾನು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ಆ ಡ್ರೆಸ್ನಲ್ಲಿ ನನ್ನ ದೇಹ ಕಾಣಿಸುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಈ ರೀತಿ ಮಾಡಬೇಕು ಎಂದಿಗೂ ಬಯಸಲಿಲ್ಲ. ಜನರು ನನ್ನನ್ನು ದೂಷಿಸುತ್ತಿದ್ದಾರೆ. ಅಲ್ಲದೆ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದ ನನಗೆ ತುಂಬಾ ದುಃಖ ಆಗುತ್ತಿದೆ. ನನ್ನ ಸ್ವಂತ ವ್ಯಕ್ತಿಯೇ ನನ್ನನ್ನು ನಂಬಲಿಲ್ಲ. ನನ್ನ ಜೀವನ ಮುಗಿದು ಹೋಗಿದೆ ಎಂದು ನನಗೆ ಅನಿಸುತ್ತಿದೆ.
Advertisement
ಅಲ್ಲದೆ ನಾನು ತುಂಬಾನೇ ಸ್ಟ್ರಾಂಗ್ ಎಂದು ನನಗೆ ಅನಿಸುತ್ತದೆ. ಆದರೆ ಈಗ ನನ್ನ ಜೀವನ ಮುಗಿದು ಹೋಗಿದೆ. ನನ್ನ ದೇಹವನ್ನು ತೋರಿಸಲು ನನಗೆ ಆಸಕ್ತಿ ಇಲ್ಲ. ಜನರು ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಇಂದು ತುಂಬಾ ದುಃಖದಲ್ಲಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.