ಸಾಜಿದ್ ಖಾನ್ ವಿಷಯದಲ್ಲಿ ರಾಖಿ ಸಾವಂತ್(Rakhi Sawant) ಮತ್ತು ಶೆರ್ಲಿನ್(Sherlyn Chopra) ನಡುವೆ ಮಾತಿನ ಚಕಮಕಿ ಜೋರಾಗಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದು, ಈ ವಿಚಾರ ಈಗ ಠಾಣೆ ಮೆಟ್ಟಿಲೇರಿದೆ. ಇದೀಗ ಶೆರ್ಲಿನ್ ಚೋಪ್ರಾ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.
ಶೆರ್ಲಿನ್ ಮತ್ತು ರಾಖಿ ಸಾವಂತ್ ನಡುವಿನ ವಾರ್ ಇದೀಗ ಕಾನೂನು ರೂಪ ಪಡೆದಿದೆ. ಶೆರ್ಲಿನ್ ವಿರುದ್ಧ ನಟಿ ರಾಖಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶನಿವಾರ ಮುಂಬೈನ(Mumbai) ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ತನ್ನ ವಕೀಲರೊಂದಿಗೆ ಶೆರ್ಲಿನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಈ ಕುರಿತು ಮಾಧ್ಯಮಕ್ಕೆ ರಾಖಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್
ಶೆರ್ಲಿನ್ ಚೋಪ್ರಾ ವಿರುದ್ಧ ಹಲವು ಸಾಕ್ಷ್ಯಾಧಾರಗಳಿವೆ. ಅದನ್ನು ನ್ಯಾಯಾಲಯಕ್ಕೆ ಒದಗಿಸುತ್ತೇನೆ. ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನುಗಳಿವೆ. ಆದರೆ ಅದನ್ನು ಕೆಲವರು ದೂರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್(Sajid Khan) ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಇನ್ನೂ ಶೆರ್ಲಿನ್, ಹಣಕ್ಕಾಗಿ ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂದು ನಟಿಯ ವಿರುದ್ಧ ರಾಖಿ ಆರೋಪ ಮಾಡಿದ್ದಾರೆ.
ನಾನು ಸಮಾಜ ಸೇವಕಿ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಶೆರ್ಲಿನ್ ಇಲ್ಲಸಲ್ಲದ ಆರೋಪ ಮಾಡಿರುವುದು ನನ್ನ ಜೀವನಕ್ಕೂ ಪರಿಣಾಮ ಬೀರಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.