ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಮೈಸೂರು ಹುಡುಗ ಆದಿಲ್ ಖಾನ್ (Adil Khan) ಜೊತೆ ವೈವಾಹಿಕ ಜೀವನ ಆರಂಭಿಸುತ್ತಿರುವ ಬೆನ್ನಲ್ಲೇ ನಟಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರಾಖಿ ಸಾವಂತ್‌ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಮದುವೆ ವಿಚಾರವಾಗಿ ರಾಖಿ ಸಖತ್ ಸುದ್ದಿಯಲ್ಲಿದ್ದರು. ಆದಿಲ್ ಜೊತೆಗಿನ ಮದುವೆ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ʻಬಿಗ್ ಬಾಸ್ʼ ಖ್ಯಾತಿಯ ರಾಖಿ ಸಾವಂತ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಶೆರ್ಲಿನ್ ಚೋಪ್ರಾ (Sherlyn Chopra) ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಖಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ಯುವ ನಟ ಧನುಷ್ ನಿಧನ
ರಾಖಿ ಬಂಧನ ಬಗ್ಗೆ ಟ್ವಿಟ್ಟರ್‌ನಲ್ಲಿ ನಟಿ ಶೆರ್ಲಿನ್ ಮಾಹಿತಿ ಹಂಚಿಕೊಂಡಿದ್ದಾರೆ. ಅಂಬೋಲಿ ಪೊಲೀಸರು ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. (ಜ.18)ರಂದು ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್ ಕೋರ್ಟ್ ತಿರಸ್ಕರಿಸಿತ್ತು ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.
BREAKING NEWS!!!
AMBOLI POLICE HAS ARRESTED RAKHI SAWANT IN RESPECT WITH FIR 883/2022
YESTERDAY, RAKHI SAWANT’S ABA 1870/2022 WAS REJECTED BY MUMBAI SESSIONS COURT
— Sherlyn Chopra (शर्लिन चोपड़ा)???????? (@SherlynChopra) January 19, 2023
ಕಳೆದ ವರ್ಷ ಮೀ ಟೂ ಆರೋಪಿ ಸಾಜಿದ್ ಖಾನ್ (Sajid Khan) ವಿರುದ್ಧ ನೀಡಿದ ಹೇಳಿಕೆಗಾಗಿ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆಯನ್ನು ದಾಖಲಿಸಿದ ನಂತರ ಶೆರ್ಲಿನ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಲ್ಮಾನ್ ಖಾನ್ (Salman Khan), ಸಿನಿಮಾ ನಿರ್ಮಾಪಕನನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ರಾಖಿ, ಶೆರ್ಲಿನ್ ಹೇಳಿಕೆಯನ್ನು ಖಂಡಿಸಿದರು. ಪಾಪರಾಜಿಗಳೊಂದಿಗೆ ಮಾತನಾಡಿದ್ದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂದು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದರು. ನಂತರ ಶೆರ್ಲಿನ್ ಚೋಪ್ರಾ, ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದರು.
ಇನ್ನೂ ಪತಿ ಆದಿಲ್ ಜೊತೆ ಸೇರಿ ರಾಖಿ ಡ್ಯಾನ್ಸ್ ಅಕಾಡೆಮಿಯನ್ನ ಶುರು ಮಾಡಿದ್ದರು. ಅದರ ಉದ್ಘಾಟನೆ ಮಾಡಬೇಕಿತ್ತು. ಜ.19 ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುನ್ನವೇ ನಟಿಯ ಬಂಧನವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k