ಬಾಲಿವುಡ್ ನಟಿ ರಾಖಿ ಸಾವಂತ್, ಬಂದೂಕು (Gun) ಹಿಡಿದುಕೊಂಡು ಬೀದಿಗೆ ಬಂದಿದ್ದಾರೆ. ಸೈನಿಕರ ವೇಷದಲ್ಲಿ ಬಂದೂಕು ಹಿಡಿದುಕೊಂಡು ಬೀದಿಗೆ ಬಂದ ರಾಖಿ, ದೇಶ ಸೇವೆಗಾಗಿ ನಾನು ಸದಾ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಪ್ಯಾಲೇಸ್ತೀನ್ (Palestine) ಮತ್ತು ಇಸ್ರೇಲ್ ನಡುವೆ ಯುದ್ದ ನಡೆದಿರುವ ಈ ಸಂದರ್ಭದಲ್ಲಿ ರಾಖಿ ಹುಚ್ಚಾಟ ಕಂಡು ಕೆಲವರು ಈಕೆಯನ್ನು ಪ್ಯಾಲೇಸ್ತೀನ್ ಗೆ ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಚಾರಕ್ಕಾಗಿ ನಾನಾ ವೇಷಗಳನ್ನು ಹಾಕುತ್ತಲೇ ಇರುತ್ತಾರೆ ರಾಖಿ ಸಾವಂತ್. ಈವರೆಗೂ ನಾನಾ ರೀತಿಯ ಕಾಸ್ಟ್ಯೂಮ್ ಹಾಕಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಸೈನಿಕನ ವೇಷದಲ್ಲಿ ರಾಖಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಜನರು ಈ ವೇಷ ಮತ್ತು ಅವಳ ಡ್ರಾಮಾಗೆ ನೆಗೆಟಿವ್ ಕಾಮೆಂಟ್ ಗಳನ್ನೇ ಹಾಕಿದ್ದಾರೆ.
ರಿಷಬ್ ಶೆಟ್ಟಿಗೆ ವಿಚಿತ್ರ ಬೇಡಿಕೆ ಇಟ್ಟ ರಾಖಿ
ರಾಖಿ ಸಾವಂತ್ (Rakhi Sawant) ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ತಮ್ಮ ಬಯೋಪಿಕ್ (Biopic) ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದರು. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂದಿದ್ದರು.
ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ (Vidya Balan) ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ಆ ಬಗ್ಗೆ ನಾನು ಯೋಚಿಸಿಲ್ಲ ಎಂದು ರಾಖಿ ಸಾವಂತ್ ಎಂದಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಸೂಚಿಸಿದ್ದಾರೆ. ರಿಷಬ್, ತನ್ನ ಬಯೋಪಿಕ್ ನಿರ್ದೇಶಿಸಿದರೆ ಚೆನ್ನಾಗಿರುತ್ತೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]