ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ: ಟಿಕಾಯತ್

Advertisements

ನವದೆಹಲಿ: ಉದಯ್‍ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯವಾಗಿದೆ. ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎನ್ನುವ ಮೂಲಕ ಹತ್ಯೆಯನ್ನು ರೈತ ನಾಯಕ ರಾಕೇಶ್ ಟಿಕಾಯತ್ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆಗಳು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಏಕೆ ನಡೆಯುತ್ತವೆ. ಹೀಗೆ ಏನಾದರೂ ಸಣ್ಣ ಘಟನೆ ಸಂಭವಿಸಿದರೂ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ ಎಂದು ಕಿಡಿಕಾರಿದರು.

Advertisements

ರಾಜಸ್ಥಾನ ಅಥವಾ ಪಂಜಾಬ್ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ಹೆಚ್ಚುತ್ತಿವೆ. ಇದು ಬಿಜೆಪಿಯ ಸಮಯವಾಗಿದೆ. ಕೇಂದ್ರದಲ್ಲಿ ಇರುವವರು ಇದೆಲ್ಲವನ್ನು ಮಾಡಿಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಏನಾದರೂ ಚಿಕ್ಕ ಘಟನೆ ನಡೆದರೂ ಬಿಜೆಪಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಹೇಳುತ್ತಾರೆ ಎಂದು ಗುಡುಗಿದರು. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

ಭಾರತದಲ್ಲಿ ಸಂವಿಧಾನ, ಕಾನೂನು ಮತ್ತು ಸೆಕ್ಷನ್‍ಗಳಿವೆ. ಆದರೆ ಅವೆಲ್ಲವೂ ಏನು ಮಾಡುತ್ತಿವೆ. ಇದರ ಬದಲು ಪಾಕಿಸ್ತಾನವನ್ನು ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದವರು ಏನು ಮಾಡಿದ್ದಾರೆ. ಈ ಕೊಲೆ ಮಾಡಿದವರನ್ನು ಕಾನೂನಿನ ನಿಯಮಾನುಸಾರ ಬಂಧಿಸಿ ಎಂದರು.

Advertisements

ಈಗಾಗಲೇ ಉದಯಪುರದ ಟೈಲರ್ ಹತ್ಯೆಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದ್ದು, ಪಾಕಿಸ್ತಾನದ ನಂಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ಗೌಸ್ ಮೊಹಮ್ಮದ್ 2014ರಲ್ಲಿ 45 ದಿನಗಳ ತರಬೇತಿಗಾಗಿ ಕರಾಚಿಗೆ ಹೋಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಇದನ್ನೂ ಓದಿ: ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ: ಉದಯಪುರ ಟೈಲರ್ ಪುತ್ರರು

Live Tv

Advertisements
Exit mobile version