ಬಿಜೆಪಿ ಸರ್ಕಾರ ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ: ಟಿಕಾಯತ್

Public TV
1 Min Read
Rakesh Tikait

ನವದೆಹಲಿ: ನನ್ನನ್ನು ಬಿಜೆಪಿ ಸರ್ಕಾರ ಕೊಲ್ಲಲು ಯತ್ನಿಸುತ್ತಿದೆ ಎಂದು ರಾಷ್ಟ್ರೀಯ ‌ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮಸಿ ಹಾಕಿ ದಾಳಿ ಮಾಡಿರುವುದು ಯೋಜಿತ ಪಿತೂರಿಯಾಗಿದೆ. ಇದರ ಜೊತೆಗೆ ಸರ್ಕಾರ ಕೊಲ್ಲಲು ಬಯಸುತ್ತಿದೆ. ಇದಕ್ಕೆ ಕರ್ನಾಟಕ ಮತ್ತು ದೆಹಲಿಯಲ್ಲಿ ಅವರ ಮೇಲೆ ನಡೆದ ದಾಳಿಗಳು ಸಾಕ್ಷಿಯಾಗಿದೆ ಎಂದು ಹೇಳಿದರು.

Rakesh Tikait

ಸರ್ಕಾರವು ರೈತ ಸಂಘವನ್ನು ನಾಶಮಾಡಲು ಬಯಸುತ್ತಿದೆ. ಇದರ ಜೊತೆಗೆ ನಮ್ಮ ಕುಟುಂಬ ಮತ್ತು ಸಂಘಟನೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಇದು ಎಂದಿಗೂ ಸಂಭವಿಸುವುದಿಲ್ಲ. ಯಾವಾಗಲೂ ರೈತರ ಧ್ವನಿಯನ್ನು ಬಲವಾಗಿ ಎತ್ತುತ್ತೇನೆ. ಹಾಗೂ ಅದನ್ನು ಮುಂದುವರಿಸುತ್ತದೆ ಎಂದರು. ಇದನ್ನೂ ಓದಿ: ಕಾನ್ಪುರದಲ್ಲಿ ಘರ್ಷಣೆ – ಸಾವಿರ ಮಂದಿ ಮೇಲೆ ಎಫ್‍ಐಆರ್, 18 ಮಂದಿ ಅರೆಸ್ಟ್

ಮಹಾತ್ಮ ಗಾಂಧೀಜಿಯನ್ನು ಸಂಚುಕೋರರು ಹತ್ಯೆ ಮಾಡಿದಂತೆಯೇ, ದೇಶ ಮತ್ತು ಅದರ ರೈತರ ಪರವಾಗಿ ಮಾತನಾಡುವ ಯಾರೇ ಆಗಲಿ ಸಂಚುಕೋರರಿಂದ ಗುರಿಯಾಗುತ್ತಾರೆ ಎನ್ನುವ ಮೂಲಕ ಮಸಿ ದಾಳಿ ಮತ್ತು ಮಹಾತ್ಮ ಗಾಂಧಿ ಅವರ ಹತ್ಯೆಯ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದರು.

Black ink thrown at farmer leader Rakesh Tikait in Bengaluru

ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿತ್ತು. ಇದನ್ನೂ ಓದಿ: ಬಾಲಕ್ಕೆ ಬೆಂಕಿ ಇಟ್ಟಿದ್ರಿಂದ ಲಂಕೆ ಸುಟ್ಟು ಹೋಯ್ತು, ಚಡ್ಡಿಗೆ ಬೆಂಕಿ ಹಚ್ಚಿದ್ರೆ ನಿಮ್ಮ ಬುಡವೇ ಬೂದಿಯಾಗುತ್ತೆ: ಈಶ್ವರಪ್ಪ

Share This Article