ನವದೆಹಲಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ, ರೈತ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರವು ನಮಗೆ ದ್ರೋಹ ಮಾಡಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ರೈತರ ಪ್ರತಿಭಟನೆ ವೇಳೆ ಹುತಾತ್ಮರಾದವರಿಗೆ ಕೇಂದ್ರ ಪರಿಹಾರ ನೀಡಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ನೀಡುವ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ಏಕೆ ನೀಡಿಲ್ಲ ಎಂಬುದನ್ನು ಕೇಂದ್ರ ವಿವರಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ
ದೇಶದ ರೈತರಿಗೆ ಸರ್ಕಾರ ದ್ರೋಹ ಮಾಡುವ ಮೂಲಕ ಅವರ ಗಾಯಕ್ಕೆ ಉಪ್ಪು ಸವರಿದೆ. ಈ ದ್ರೋಹದಿಂದ ದೇಶದ ರೈತರು ಸುದೀರ್ಘ ಹೋರಾಟಕ್ಕೆ ಸಿದ್ಧರಾಗಬೇಕೆಂಬುವುದು ಸ್ಪಷ್ಟವಾಗಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೇಂದ್ರವು ಅಧಿಕ ತೆರಿಗೆ ಸಂಗ್ರಹಕ್ಕೆ ಒತ್ತು ಕೊಡ್ತಿದೆಯೇ ಹೊರತು ಜನರ ನೋವಿಗೆ ಸ್ಪಂದಿಸ್ತಿಲ್ಲ: ರಾಹುಲ್ ಗಾಂಧಿ
ಪ್ರತಿಭಟನೆ ವೇಳೆ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳದಿರುವುದು, ಹುತಾತ್ಮರಿಗೆ ಪರಿಹಾರ ನೀಡದಿರುವುದು, ವಿದ್ಯುತ್ ಬಿಲ್‍ಗಳ ಬಗ್ಗೆ ಯಾವುದೇ ಮಾತುಗಳಿಲ್ಲ. ಕೇಂದ್ರ ಏಜೆನ್ಸಿಗಳ ನೋಟೀಸ್ ಮತ್ತು ಪ್ರಕರಣಗಳಿಗೆ ಪರಿಹಾರ ನೀಡದಿರುವುದು ರೈತರಿಗೆ ಮಾಡಿದ ದ್ರೋಹ. ಇದಕ್ಕೆ ಕೇಂದ್ರ ಸ್ಪಂದಿಸಬೇಕು ಎಂದು ಟಿಕಾಯತ್ ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
Rakesh Tikait, Central Government, Farmers, Delhi