`ಕಾಮಿಡಿ ಕಿಲಾಡಿಗಳು ಸೀಸನ್ 3’ರ ಖ್ಯಾತಿಯ ರಾಕೇಶ್ ಪೂಜಾರಿ ಅಂತ್ಯಕ್ರಿಯೆ ಉಡುಪಿಯ(Udupi) ಹೂಡೆಯ ಸ್ಮಶಾನದಲ್ಲಿ ನಡೆಯಿತು.
ಹುಟ್ಟೂರು ಉಡುಪಿಯಲ್ಲಿ ರಾಕೇಶ್ ಪೂಜಾರಿ(Rakesh Poojary) ಅವರ ಅಂತ್ಯಕ್ರಿಯೆ ನಡೆದಿದೆ. ಯೋಗರಾಜ್ ಭಟ್, ಅನುಶ್ರೀ, ರಕ್ಷಿತಾ ಪ್ರೇಮ್, ಮಲೈಕಾ, ನಯನ, ಸೂರಜ್ ಸೇರಿ ಅನೇಕ ಕಲಾವಿದರು ರಾಕೇಶ್ ಅವರ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್
ಹೂಡೆ ಬೀಚ್(Hoode Beach) ಪಕ್ಕದಲ್ಲಿ ರಾಕೇಶ್ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಮನೆಯಿಂದ ಸ್ಮಶಾನದವರೆಗೆ ಅಂತಿಮ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಟನಟಿಯರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ
ರಾಕೇಶ್ ಅವರ ಮಾವಂದಿರಾದ ಸತೀಶ್ ಪೂಜಾರಿ ಹಾಗೂ ಶ್ರೀಧರ ಪೂಜಾರಿ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅವರ ಅಂತ್ಯಕ್ರಿಯೆಯು ಬಿಲ್ಲವ ಸಂಪ್ರದಾಯದಂತೆ ಪಡುತೋನ್ಸೆಯ ಬಿಲ್ಲವ ಸಮಾಜ ರುದ್ರಭೂಮಿಯಲ್ಲಿ ನೆರವೇರಿತು.
ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು(Comedy Khiladigalu Season-3) ಸೀಸನ್ -3 ರ ಗ್ರ‍್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್, ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನ ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು. ಅಷ್ಟೇ ಅಲ್ಲ ಪೈಲ್ವಾನ್, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ: ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ
ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟನ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.