ನವದೆಹಲಿ: ಅವರು ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ 5000 ರೂಪಾಯಿಯೊಂದಿಗೆ ಮಾರ್ಕೇಟ್ ಗೆ ಎಂಟ್ರಿಯಾದ ಅವರು ಸದ್ಯ ಹೊಂದಿದ್ದು 11,000 ಕೋಟಿಯ ಪೊರ್ಟ್ ಪೊಲಿಯೊಗಳನ್ನ. ಆಕಾಶ್ ಏರ್ಲೈನ್ಸ್ ಮೂಲಕ ಮತ್ತಷ್ಟು ಎತ್ತರಕ್ಕೆ ಹಾರಲು ಸಿದ್ಧರಾಗಿದ್ದ ಆ ವ್ಯಕ್ತಿಯ ಬಾಳಲಿ ದುರ್ವಿಧಿ ಆಟವಾಡಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ. ಜುಂಜುನ್‌ವಾಲ ಅಷ್ಟಕ್ಕೂ ಯಾರು ಅವರು? ಏನಾಯ್ತು? ಅನ್ನೋ ಮಾಹಿತಿ ಇಲ್ಲಿದೆ.
Rakesh Jhunjhunwala was indomitable. Full of life, witty and insightful, he leaves behind an indelible contribution to the financial world. He was also very passionate about India’s progress. His passing away is saddening. My condolences to his family and admirers. Om Shanti. pic.twitter.com/DR2uIiiUb7
— Narendra Modi (@narendramodi) August 14, 2022
ಮುಂಬೈ ದಲಾಲ್ ಸ್ಟ್ರೀಟ್ ಕಿಂಗ್ ಅಂತ್ಲೆ ಕರೆಸಿಕೊಳ್ತಿದ್ದ ರಾಕೇಶ್ ಜುಂಜುನ್‌ವಾಲ ಭಾರತದ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಇವರು ಕೈ ಇಟ್ಟ ಷೇರುಗಳೇಲ್ಲ ಜಾಕ್‌ಪಾಟ್ ಹೊಡೆಯುತ್ತಿದ್ದವು. ಹೀಗಾಗೇ ಇವರನ್ನು ಅನುಸರಿಸುತ್ತಿದ್ದ ಜನರ ಸಂಖ್ಯೆ ಅಪಾರ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು
ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಸ್‌ಗೆ ಒಳಪಡುತ್ತಿದ್ದ ರಾಕೇಶ್ ಜುಂಜುನ್‌ವಾಲ ಆರೋಗ್ಯದಲ್ಲಿ ಇಂದು ಬೆಳಗ್ಗೆ ಏರುಪೇರು ಕಂಡು ಬಂದಿತ್ತು. ತಕ್ಷಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪುವ ವೇಳೆಗೆ ನಿಧನ ಹೊಂದಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಜುಂಜುನ್‌ವಾಲ ಜೀವನ ರೋಚಕ: ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ರಾಕೇಶ್ ಜುಂಜುನ್‌ವಾಲ ಜೀವನ ಆರಂಭವಾಗಿದ್ದು 5,000 ರೂಪಾಯಿಗಳಿಂದ. 1985 ರಲ್ಲಿ 5,000 ರೂಪಾಯಿಗಳೊಂದಿಗೆ ಅವರು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದರು. ಅಲ್ಲಿಂದ ಅವರು ಬದುಕೇ ಬದಲಾಯ್ತು. ಹೂಡಿಕೆ ಮಾಡಿದ ಷೇರುಗಳೇಲ್ಲ ಸಾವಿರ, ಲಕ್ಷ, ಕೋಟಿಗಳಲ್ಲಿ ಲಾಭ ಕೊಡ್ತಾ ಹೋದವು. ಅಲ್ಲಿಂದ ಅವರು ದೇಶದ ಅತಿದೊಡ್ಡ ಟ್ರೇಡರ್ ಆಗಿ ಬದಲಾದರು.
ಇತ್ತಿಚೆಗೆ ಟೈಟಾನ್ ಕಂಪನಿಯಲ್ಲಿ ಇವರು ಹೂಡಿಕೆ ಮಾಡುತ್ತಿದ್ದಂತೆ ಬಹಳ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬಂದಿತ್ತು. ರಾಕೇಶ್ ಜುಂಜುನ್‌ವಾಲ ಕಂಪನಿಯೊಂದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದ್ರೆ ಅಲ್ಲೊಂದು ಮ್ಯಾಜಿಕ್ ಆಗಲಿದೆ ಎನ್ನುವುದು ಅವರ ಅನುಯಾಯಿಗಳಾಗಿ ಅದಾಗಲೇ ಗೊತ್ತಾಗುತ್ತಿತ್ತು. ಇದನ್ನೂ ಓದಿ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ವಿವಾದ – ಪಾಲಿಕೆ ಕಾರ್ಯಕ್ಕೆ SDPI ವಿರೋಧ
ಆಕಾಶ್ ಏರ್ಲೈನ್ಸ್ ಆರಂಭಿಸಿದ್ದ ಜುಂಜುನ್‌ವಾಲ: ಷೇರು ಮಾರುಕಟ್ಟೆ ಹೂಡಿಕೆದಾರನಾಗಿದ್ದ ರಾಕೇಶ್ ಜುಂಜುನ್‌ವಾಲ ಅವರು ಇತ್ತಿಚೆಗೆ ಆಕಾಶ್ ಹೆಸರಿನಲ್ಲಿ ಹೊಸ ಏರ್ಲೈನ್ಸ್ ಆರಂಭ ಮಾಡಿದ್ದರು. ಅತ್ಯುತ್ತಮ ಸೇವೆ ಕೊಡುವ ಇರಾದೆ ಹೊಂದಿದ್ದ ಅವರು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರು.
ಜುಂಜುನ್‌ವಾಲ ನಿಧನಕ್ಕೆ ಮೋದಿ ಸಂತಾಪ: ಇನ್ನು ರಾಕೇಶ್ ಜುಂಜುನ್‌ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಜುಂಜುನ್‌ವಾಲ ಅವರು ಅದಮ್ಯ ಚೇತನ ವ್ಯಕ್ತಿ. ಅವರ ಪೂರ್ಣ ಬದುಕು ವಿನೋದ ಹಾಗೂ ಗಾಂಭೀರ್ಯದಿಂದ ಕೂಡಿದೆ. ಹಣಕಾಸು ಕ್ಷೇತ್ರದಲ್ಲಿ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು ʻಓಂ ಶಾಂತಿʼ ಎಂದು ಸಂತಾಪ ಸೂಚಿಸಿದ್ದಾರೆ.