ಮುಂಬೈ: ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್‍ವಾಲ ಇಂದು ಇಹಲೋಕ ತ್ಯಜಿಸಿದ್ದಾರೆ. ಇಂದು ಅವರು ಮೃತಪಟ್ಟರೂ ಅವರು ಸಾಧನೆಯ ಕಥೆಯಿಂದ ಮುಂದೆಯೂ ಜೀವಂತವಾಗಿರುತ್ತಾರೆ. ಜುಂಜುನ್‍ವಾಲ ಅವರ ಕನಸು ಕೆಲವೇ ದಿನಗಳ ಮೊದಲು ನನಸಾಗಿತ್ತು. ಕಡಿಮೆ ಬೆಲೆಗೆ ಜನ ಸಾಮಾನ್ಯರಿಗೂ ವಿಮಾನ ಸೇವೆ ನೀಡಲು ಆರಂಭಿಸಿದ್ದ ಅವರ ‘ಆಕಾಶ್’ ಕಂಪನಿಯ ವಿಮಾನ ಟೇಕಾಫ್ ಆಗಿತ್ತು.
Advertisement
ಹೌದು. ರಾಕೇಶ್ ಜುಂಜುನ್‍ವಾಲ 5,000 ರೂಪಾಯಿಇಂದ ಹೂಡಿಕೆ ಆರಂಭಿಸಿ ಆ ಬಳಿಕ ಕೋಟ್ಯಧಿಪತಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಹೇಳಿದ ತಕ್ಷಣ ಷೇರು ಮಾರುಕಟ್ಟೆಯಲ್ಲಿ ಹಲ್ ಚೆಲ್ ಶುರುವಾಗುವ ಹಂತಕ್ಕೆ ಬೆಳೆದರು. ಅಲ್ಲದೇ ಷೇರು ಹೂಡಿಕೆದಾರರು ಅವರನ್ನು ಅನುಸರಿಸಲು ಪ್ರಾರಂಭಿಸಿದ್ದರು. ಈ ನಡುವೆ ರಾಕೇಶ್ ಜುಂಜುನ್‍ವಾಲ ಏರ್‌ಲೈನ್ಸ್ ಒಂದರ ಆರಂಭಕ್ಕೆ ಮುಂದಾಗಿದ್ದರು. ಈ ಕಾರ್ಯದಲ್ಲಿ ಯಶಸ್ವಿ ಕೂಡ ಆಗಿದ್ದರು. ಜುಂಜುನ್‍ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್ ಸೇರಿಕೊಂಡು ಆಕಾಶ್ ಏರ್ ಕಂಪನಿಯಲ್ಲಿ ಹೂಡಿಕೆ ಮಾಡಿ 2021ರ ಆಗಸ್ಟ್ ತಿಂಗಳಲ್ಲಿ ವಿಮಾನ ಕಾರ್ಯಾಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ದೊರೆಕಿತ್ತು. ಆದರೆ ಕೋವಿಡ್‍ನಿಂದಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆ ಬಳಿಕ ಆಕಾಶ್ ಏರ್‌ಲೈನ್ಸ್ ಭಾರತದಲ್ಲಿ ಹಾರಾಟ ಆರಂಭಿಕ ಕಾರ್ಯಕ್ರಮದಲ್ಲಿ ರಾಕೇಶ್ ಜುಂಜುನ್‍ವಾಲ ಕೈಗಾಡಿಯಲ್ಲಿ ಆಗಮಿಸಿ ಉಪಸ್ಥಿತರಿದ್ದರು. ಆ ಬಳಿಕ ಆಗಸ್ಟ್ 7 ರಿಂದ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಆಕಾಶ್ ವಿಮಾನ ಹಾರಾಟ ಆರಂಭಿಸಿತು ಆದಾದ ಒಂದೇ ವಾರದಲ್ಲಿ ಜುಂಜುನ್‍ವಾಲ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್ ರಾಕೇಶ್ ಜುಂಜುನ್‌ವಾಲ ನಿಧನ
Advertisement
Advertisement
ಜುಂಜುನ್‍ವಾಲ ಈ ಏರ್‌ಲೈನ್ಸ್ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿದ್ದರು. ಅಲ್ಲದೇ ದೇಶದ ಜನರಿಗೆ ಕಡಿಮೆ ಟಿಕೆಟ್ ದರ ಒದಗಿಸಿ ಎಲ್ಲರಿಗೂ ವಿಮಾನಯಾನದ ಸೇವೆ ನೀಡಬೇಕೆಂಬ ಮಹತ್ತರವಾದ ಕನಸು ಹೊಂದಿದ್ದರು. ಅಲ್ಲದೇ ಆರಂಭಿಕ ಹಂತದಲ್ಲೇ ಆಕಾಶ್ ಏರ್ ಕಂಪನಿ ಕಡಿಮೆ ಟಿಕೆಟ್ ದರವನ್ನು ನಿಗದಿ ಪಡಿಸುವುದಾಗಿ ಹೇಳಿಕೊಂಡಿತ್ತು. ಹಾಗಾಗಿ ಆಕಾಶ ಏರ್ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಟಯರ್ 2, ಟಯರ್ 3 ನಗರಗಳಿಗೆ ವಿಮಾನ ಸೇವೆಯನ್ನು ನೀಡಲು ಕಂಪನಿ ಮುಂದಾಗಿದೆ. ಆಕಾಶ ಕಂಪನಿ 72 ಬೋಯಿಂಗ್ 737 ಮ್ಯಾಕ್ಸ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ.
Advertisement
— Akasa Air (@AkasaAir) August 14, 2022
ಈ ಎಲ್ಲವನ್ನು ನೋಡಬೇಕೆಂದಿದ್ದ ಜುಂಜುನ್‍ವಾಲ ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಿಸ್‍ಗೆ ಒಳಪಟ್ಟಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದು ಇಂದು ಬೆಳಗ್ಗೆ ಅವರನ್ನು ಮುಂಬೈನಾ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪು ವೇಳೆಗೆ ನಿಧನ ಹೊಂದಿದ್ದರು. ಸದ್ಯ ಅವರು 11,000 ಕೋಟಿಯ ಒಡೆಯನಾಗಿ ವಿಶ್ವಕ್ಕೆ ಪರಿಚಿತರಾಗಿ ಎಲ್ಲರಿಂದ ದೂರ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ
Spirit of the Big Bill. Man was full of life and energy even when on a wheel chair. Om Shanti.
RIP Legend Rakesh Jhunjhunwala. pic.twitter.com/ESYsblIMRe
— Twinkle (@Twinkleinvest) August 14, 2022
ಜುಂಜುನ್‍ವಾಲ ನಿಧನಕ್ಕೆ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆಕಾಶ ಏರ್ ಕೂಡ ಸಂತಾಪ ಸೂಚಿಸಿದೆ ಮತ್ತು ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಯೋಗಕ್ಷೇಮಕ್ಕಾಗಿ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಕಾಶ್ ಏರ್ ಒಂದು ಶ್ರೇಷ್ಠ ವಿಮಾನಯಾನವನ್ನು ಆರಂಭಿಸಲು ಶ್ರಮಿಸಿದ ಅವರ ನಿಷ್ಠೆಗೆ ಆಕಾಶ್ ಏರ್ ಕಂಬನಿ ಮಿಡಿಯುತ್ತದೆ ಎಂದು ಸಂತಾಪ ಸೂಚಿಸಿತ್ತು.