ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್ ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಶನ್ ನಡೆಯುತ್ತೆ. ಈ ವಾರ ಕೂಡ ನಾಮಿನೇಶನ್ ನಡೆದಿದ್ದು, ಆಂಡ್ರ್ಯೂ, ಶಶಿ ಹಾಗೂ ಧನರಾಜ್ ಮೂವರು ರಾಕೇಶ್ ಅವರನ್ನು ನಾಮಿನೇಟ್ ಮಾಡಿದರು. 3 ವೋಟ್ ಪಡೆದು ರಾಕೇಶ್ ನಾಮಿನೇಟ್ ಆಗಿದ್ದರು.
Advertisement
ನಾಮಿನೇಶನ್ ನಂತರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳಿಗೆ ಚಟುವಟಿಕೆಯನ್ನು ನೀಡಿದರು. `ನನ್ ಬಲೂನೇ ಸ್ಟ್ರಾಂಗು ಗುರು’ ಎಂದು ಟಾಸ್ಕ್ ನೀಡಿ ಯಾರ ಬಲೂನ್ ಕೊನೆಯವರೆಗೂ ಒಡೆಯದೇ ಹಾಗೇ ಇರುತ್ತದೆಯೋ ಅವರು ಸೇಫ್ ಆಗಬಹುದು. ಅಷ್ಟೇ ಅಲ್ಲದೇ ಸೇಫ್ ಆಗಿರುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್ಬಾಸ್ ಕಡೆಯಿಂದ ಆದೇಶ ಬಂತು.
Advertisement
Advertisement
ರಾಕೇಶ್ ಈ ಟಾಸ್ಕ್ ನಲ್ಲಿ ಭಾಗವಹಿಸಿ ಕೊನೆಯವರೆಗೂ ಬಲೂನ್ ಒಡೆಯದೇ ನೋಡಿಕೊಂಡರು. ಬಳಿಕ ಈ ಟಾಸ್ಕ್ ನಲ್ಲಿ ಗೆದ್ದು ಅವರು ಸೇಫ್ ಆದರು. ಸೇಫ್ ಆದ ನಂತರ ರಾಕೇಶ್ ಅವರು ಜಯಶ್ರೀಯನ್ನು ನಾಮಿನೇಟ್ ಮಾಡಿದರು.
Advertisement
ಈ ವಾರ ಬಿಗ್ಬಾಸ್ ಮನೆಯಲ್ಲಿ ಜಯಶ್ರೀ, ಆಂಡ್ರ್ಯೂ, ಸೋನು, ಅಕ್ಷತಾ, ಧನರಾಜ್, ನವೀನ್, ರ್ಯಾಪಿಡ್ ರಶ್ಮಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬೀಳಲಿದ್ದಾರೆ ಎಂಬುದು ಶನಿವಾರ ಕಿಚ್ಚ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv