ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ (Rajyotsava Award) ಭಾಜನವಾಗಿದ್ದ ಮುಂಬೈನ ‘ಚಿಣ್ಣರ ಬಿಂಬ’ (Chinnara Bimba) ಸಾಂಸ್ಕೃತಿಕ ಸಂಸ್ಥೆ, ಕನ್ನಡ ರಾಜ್ಯೋತ್ಸವ ದಿನದಂದು (ಬುಧವಾರ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕನ್ನಡ ರಾಜ್ಯೋತ್ಸವ ದಿನದಂದು (ಬುಧವಾರ) ಬೆಂಗಳೂರಿನಲ್ಲಿ ಸಂಸ್ಥೆಯ ಪರವಾಗಿ ಪ್ರಕಾಶ್ ಭಂಡಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಹಾಜರಿದ್ದರು.
Advertisement
ಮುಂಬೈನಂಥ ಜನನಿಬಿಡ ಮಹಾನಗರದಲ್ಲಿ ಆಧುನಿಕ ಜಗತ್ತಿನ ವೈಭವೋಪೇತ ದಿನಚರಿಗಳಲ್ಲಿ ಮುಳುಗಿ ಹೋಗಿರುವ, ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಅನುಸರಿಸಿಕೊಂಡು ಬದುಕಿ ನಮ್ಮ ತನವನ್ನೇ ಕಳೆದುಕೊಳ್ಳುವ ಅಪಾಯದಿಂದ ಹೊರತರುವ ಬಹುದೊಡ್ಡ ಜವಾಬ್ದಾರಿಯನ್ನು ಕಳೆದ 21 ವರ್ಷಗಳಿಂದ ನಿಷ್ಠೆಯಿಂದ ನಿಭಾಯಿಸಿಕೊಂಡು ಬಂದಿರುವ ಸಂಸ್ಥೆ ಚಿಣ್ಣರ ಬಿಂಬ. ಇಲ್ಲಿ ಮಕ್ಕಳಿಗೆ ನಮ್ಮ ನಾಡಿನ ರೀತಿ-ನೀತಿ, ಕಟ್ಟುಕಟ್ಟಳೆ, ಧಾರ್ಮಿಕ ವಿಧಿ-ವಿಧಾನಗಳನ್ನು ಹೇಳಿಕೊಡುತ್ತಿದೆ. ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಪುರಾತನ ಹಾಗೂ ಸನಾತನ ಸಂಸ್ಕೃತಿಯ ಎಳೆಎಳೆಯನ್ನು ಬಿಡಿಸಿ ಹೇಳಿ, ಈ ಮಕ್ಕಳು ಇವೆಲ್ಲವನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿ ನಾಳಿನ ಬಾಳಿನ ಭದ್ರ ಬುನಾದಿಗೆ ನಾಂದಿ ಹಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನ್ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ
Advertisement
Advertisement
ಚಿಣ್ಣರ ಬಿಂಬವು ತನ್ನದೇ ಆದ ವಿಶಿಷ್ಟ ಚಟುವಟಿಕೆಗಳಿಂದಾಗಿ ಇಂದು ಹೊರನಾಡು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಒಳನಾಡಾದ ಕರ್ನಾಟಕದಲ್ಲೂ ಮನೆಮಾತಾಗಿದೆ. 6 ರಿಂದ 14 ರ ವರೆಗಿನ ವಯಸ್ಸಿನ ಮಕ್ಕಳಿಗೆ ಯೋಗ್ಯ ತರಬೇತಿ, ಮಾರ್ಗದರ್ಶನ ದೊರಕಿದಲ್ಲಿ ಈ ಎಳೆಯರು ಯಾವ ಮಟ್ಟಕ್ಕೆ ಏರಬಹುದು? ಇವರ ಪ್ರತಿಭೆ ಯಾವ ಶಿಖರವನ್ನು ಮುಟ್ಟಬಹುದು ಎಂಬುದಕ್ಕೆ ಕಲಾ ಜಗತ್ತು ಚಿಣ್ಣರ ಬಿಂಬ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸಲು ಗುರುತರವಾದ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆ ಎರಡೂ ಮುಖಗಳು ಚಿಣ್ಣರ ಬಿಂಬದಲ್ಲಿದೆ ಎಂದು ಹೆಮ್ಮೆಯಿಂದ ಹೇಳಬಹುದು.
Advertisement
ನಮ್ಮ ಮಕ್ಕಳಲ್ಲಿರುವ ಅಂತರ್ಗತ ಪ್ರತಿಭೆ, ಶಕ್ತಿ, ಸಾಮರ್ಥ್ಯಗಳ ಸಾಣೆ ಹಿಡಿದು ಅವರನ್ನು ಸಾಂಸ್ಕೃತಿಕ ನೆಲೆಯ ಮೂಲಕ ಒಗ್ಗೂಡಿಸುವ ಒಂದು ಅಪೂರ್ವ ಕಾರ್ಯ ಸಾಧನೆಯನ್ನು ‘ಚಿಣ್ಣರ ಬಿಂಬ’ ಮಾಡುತ್ತಿದೆ. ಇದರ ಕಾರ್ಯ ಚಟುವಟಿಕೆಗಳ ತ್ವರಿತ ಗತಿಯ ವೇಗೋತ್ಕರ್ಷಕ್ಕೆ ಒಂದು ಅರ್ಥದಲ್ಲಿ ಬೆರಗಾದರೆ, ಇನ್ನೊಂದರ್ಥದಲ್ಲಿ ಅಂದು ನಾವೆಲ್ಲಾ ಕಂಡಿದ್ದ ಕನಸು ಇಂದು ನನಸಾಗುತ್ತಿರುವುದಕ್ಕೆ ಆನಂದ ತುಂದಿಲರಾಗಿದ್ದೇವೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು: ಸಿಎಂ ಘೋಷಣೆ
ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಅತ್ಯಂತ ಶಿಸ್ತುಬದ್ಧವಾಗಿ ನಡೆಯುವ ಈ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್ಚಾಗಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಚಿಣ್ಣರ ಬಿಂಬದ ಮಕ್ಕಳು ಕನ್ನಡದಲ್ಲಿ ಸ್ಪಷ್ಟವಾಗಿ, ಸುಲಲಿತವಾಗಿ ಮಾತನಾಡುತ್ತಾರೆ. ಅಸ್ವಲಿತವಾಗಿ ಚರ್ಚಾ ಸ್ಪರ್ಧೆಯನ್ನು ಕೇಳುವುದೇ ಒಂದು ಕರ್ಣಾನಂದ. ಅವರೇ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ ಎನ್ನುವುದು ಎಷ್ಟು ಆಶ್ಚರ್ಯವೋ ಅಷ್ಟೇ ಸತ್ಯ.
ಕುಮಾರಿ ಪೂಜಾ ಭಂಡಾರಿ ಸ್ಥಾಪಕಾಧ್ಯಕ್ಷೆ, ನೈನಾ ಪ್ರಕಾಶ್ ಭಂಡಾರಿ ಅವರು ಕಾರ್ಯಾಧ್ಯಕ್ಷರಾಗಿ ಸಾವಿರಾರು ಜನರ ಶ್ರಮದಿಂದ ಈ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನವಾಗಿ ಬೆಳಗುವಂತೆ ಮಾಡಿದ್ದಾರೆ. ಯಾಕೆಂದರೆ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಸತ್ಯ, ಪ್ರಾಮಾಣಿಕತೆ, ಮಾನವೀಯತೆ, ಹಿರಿಯರಿಗೆ ಗೌರವ ನೀಡುವ ರೀತಿ, ಕಿರಿಯರನ್ನು ಮಮತೆಯಿಂದ ನೋಡುವ ಪರಿ ಈ ಎಲ್ಲಾ ಅಂಶಗಳನ್ನು ತಿಳಿಯಪಡಿಸುವುದು ಅಗತ್ಯ. ಅಂತಹ ಮಹತ್ವವಾದ ಕಾರ್ಯವನ್ನು ಮಾಡುತ್ತಿರುವ ಚಿಣ್ಣರ ಬಿಂಬ, ಅದಕ್ಕೆ ಪೂರಕವಾದ ವಾತಾವರಣ ಹಾಗೂ ಹಿನ್ನೆಲೆಯನ್ನು ತನ್ನ ಶಿಬಿರಗಳಲ್ಲಿ ಮಾಡಿಕೊಡುತ್ತದೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ
ಪ್ರಕಾಶ್ ಭಂಡಾರಿ ಅವರಂತಹ ಸದ್ಗುಣಿ ಮಾರ್ಗದರ್ಶಕರ ಸಮರ್ಥ ನಾಯಕತ್ವ, ಅವರ ದೂರದೃಷ್ಟಿ, ಚಿಣ್ಣರ ಬಹುದೊಡ್ಡ ಆಸ್ತಿಯಾಗಿದೆ. ಅವರು ಎಂದಿಗೂ ತಾನು ಸುಖಾಸೀನರಾಗಿ ಇತರರಲ್ಲಿ ಕೆಲಸ ಮಾಡಿಸಿದವರಲ್ಲ. ಹಿರಿಯ ಕಿರಿಯರೆನ್ನದೆ ಆಪ್ತವಾಗಿ ಸಮಾಲೋಚಿಸಿ ಪ್ರತಿಯೊಂದು ಹೆಜ್ಜೆಯನ್ನು ಇಡುತ್ತಿರುವ ಅವರ ಹೃದಯ ವೈಶಾಲ್ಯದಿಂದಲೇ ಇಂದು ಚಿಣ್ಣರ ಬಿಂಬ ಈ ಮಟ್ಟಕ್ಕೆ ಏರಿದೆ. ಸಂಸ್ಥೆಯ ಕಾರ್ಯವೈಖರಿ ಕರ್ನಾಟಕ ಸರ್ಕಾರದ ಗಮನ ಸೆಳೆದು ಅರ್ಹವಾಗಿ ಈ ರಾಜ್ಯೋತ್ಸವದ ಗರಿ ಮುಡಿಗೇರಿಸಿಕೊಂಡಿದೆ.
Web Stories