ನ್ಯಾಯಾಧೀಶರ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಇಂದು ದರ್ಶನ್ (Darshan) ವಿಚಾರಣೆಗೆ ಹಾಜರಾಗಿದ್ದ ವೇಳೆ ಜಡ್ಜ್ ಬಳಿ ವಿಷ ಕೇಳಿರುವ ಸನ್ನಿವೇಶ ನಡೆದಿದೆ. ಜೈಲಿನಲ್ಲಿ ದರ್ಶನ್ ಜೀವನ ನರಕವಾಗಿದ್ದು, ಇರಲಾಗದೆ ವಿಷ ಕೊಟ್ಟುಬಿಡಿ ಎಂದು ಜಡ್ಜ್ ಬಳಿ ಬೇಡಿಕೊಂಡಿದ್ದಾರೆ. ದರ್ಶನ್ ಇಂಥಹ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವ್ರ ಈ ಪರಿಸ್ಥಿತಿಗೆ ಬಗ್ಗೆ ದರ್ಶನ್ ಆಪ್ತ ನಟ ರಾಜವರ್ಧನ್ (Rajavardhan) ಬೇಸರ ಹೊರಹಾಕಿದ್ದಾರೆ.
ಅವರು ಅಲ್ಲಿ ಹೀಗೆಲ್ಲ ಮಾತನಾಡೋದ್ರಿಂದ ಇಲ್ಲಿ ನಾವು ಡಿಸ್ಟರ್ಬ್ ಆಗ್ತೀವಿ ಎಂದು ದರ್ಶನ್ ಸದ್ಯದ ಪರಿಸ್ಥಿತಿ ಕುರಿತು ಮರುಕ ವ್ಯಕ್ತಪಡಿಸಿದರು. ದರ್ಶನ್ ಈ ಥರದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಅವರಿಗಾಗಿ ಇಲ್ಲಿ ಎಷ್ಟೋ ಜನ್ರು ಪ್ರಾರ್ಥನೆ ಮಾಡ್ತಿದ್ದಾರೆ. ಈಗಿರುವ ಕೆಟ್ಟ ಪರಿಸ್ಥಿತಿ ಮುಂದೆ ಸರಿ ಹೋಗುತ್ತೆ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ಹೀರೋ ಆದ ಚಿಕ್ಕಣ್ಣ: ಮಹೇಶ್ ಕುಮಾರ್ ನಿರ್ದೇಶನದ ಚಿತ್ರ
ಯಾರಿಗೋಸ್ಕರ ಇಷ್ಟೆಲ್ಲ ಮಾಡಬೇಕು ಅಂತ ದರ್ಶನ್‌ಗೆ ಜೈಲಿನಲ್ಲಿ ಅನ್ಸಿರುತ್ತೆ ನಿಜ. ಆದರೆ ಅಂಥಹ ಕೆಟ್ಟ ನಿರ್ಧಾರ ತಗೋಬೇಡಿ. ದರ್ಶನ್ ಹಾಗೆಲ್ಲ ಹೇಳ್ಬಿಟ್ರೆ ಹೊರಗಡೆ ಇರೋ ನಮಗೆ ತುಂಬಾ ಕಷ್ಟ ಆಗುತ್ತೆ. ದರ್ಶನ್ ಅವರು ತುಂಬಾ ಚೆನ್ನಾಗಿ ಬಾಳಿದ ವ್ಯಕ್ತಿ. ಅವರು ಮೂರನೇ ಬಾರಿ ಅಲ್ಲಿಗೆ ಹೋಗಿ ಹೀಗೆ ಕಷ್ಟ ಪಡ್ತಿರೋದು. ಕಷ್ಟ ಸಹಿಸಲಾಗದೆ ಹಾಗೆಲ್ಲ ಮಾತನಾಡಿರ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ – ಶ್ರೀ ಕ್ಷೇತ್ರದ ಪರ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ಅವರ ಬೇರೆ ಮುಖ ಮಾತ್ರ ಹೊರಗಡೆ ಪ್ರೊಜೆಕ್ಟ್ ಆಗ್ತಾ ಬಂದಿದೆ. ಈಗಾಗಲೇ ಅವರು ತುಂಬಾ ಕಷ್ಟ ಪಟ್ಟಿದ್ದಾರೆ. ಅವರು ನೋಡೋಕೆ ಸ್ವಲ್ಪ ಒರಟಾಗಿ ಕಾಣಿಸ್ತಾರೆ. ಆದರೆ ಅವರ ಸ್ವಭಾವ ಮೃದುವಾಗಿದೆ. ನಾವು ದರ್ಶನ್ ಅವರನ್ನು ಹತ್ತಿರದಿಂದ ನೋಡಿದ್ದೇವೆ. ಅವ್ರು ಅಷ್ಟು ಕೆಟ್ಟವರಲ್ಲ ಎಂದಿದ್ದಾರೆ.