ಬೆಂಗಳೂರು: ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದಾಗ ಬಿಜೆಪಿಗೆ, ಕಾಂಗ್ರೆಸ್‍ನಲ್ಲಿದ್ದಾಗ ಕಾಂಗ್ರೆಸ್‍ಗೆ ವೋಟ್ ಹಾಕಿದ್ದೇನೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್‍ಗೆ ಹಾಕಿ ಎಂದರು. ಆದರೆ ಎಲೆಕ್ಷನ್ ಮುಗಿದ ಮೇಲೆ ನಿರ್ಮಲಾ ಸೀತಾರಾಮನ್ (Nirmala Sitaraman) ಭೇಟಿಗೆ ಅವಕಾಶವೇ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡ್ತಾರೆ ಅವರಿಗೆ ನನ್ನ ಮತ ಕೊಡುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನೆ. ನನ್ನ ಕ್ಷೇತ್ರಕ್ಕೆ ಸರ್ಕಾರಿ ಶಾಲೆಗೆ ಯಾರು ಅನುದಾನ ಕೊಡ್ತಾರೆ ಅವರಿಗೆ ಮತ ನೀಡುತ್ತೇನೆ. 5-6 ಸಾರಿ ರಾಜ್ಯಸಭೆಗೆ ಅವರು ಹೇಳಿದಂತೆ ಹಾಕಿದ್ದೀನಿ. ಪಕ್ಷ ಹೇಳಿದಂತೆ ಕೇಳಿದ್ದೇನೆ. ಸಿಎಂ ಸ್ಥಾನಕ್ಕಾಗಿ ಅವರು ಅವಕಾಶವಾದಿಗಳಲ್ವಾ ಎಂದು ಹೆಚ್‍ಡಿಕೆಗೆ ಟಾಂಗ್ ಕೊಟ್ಟರು.
Advertisement
ಸಿಎಂ ಆದ್ಮೇಲೆ ಒಂದು, ಆಗೋ ಮುಂಚೆ ಒಂದಾ..? ವೋಟ್ ಹಾಕಿದ ಮೇಲೆ ನಮಗೆ ವ್ಯಾಲ್ಯೂ ಇಲ್ವಾ..?. ರಾಜ್ಯಸಭೆ ಅಭ್ಯರ್ಥಿಗೆ ಅನುದಾನ ಬರುತ್ತೇ.. ಆ ಅನುದಾನ ನನ್ನ ಕ್ಷೇತ್ರಕ್ಕೆ ಕೊಡೊರಿಗೆ ನಾನು ಮತ ಹಾಕುತ್ತೇನೆ ಎಂದು ಎಸ್‍ಟಿಎಸ್ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು: ಹೆಚ್‌ಡಿಕೆ