ಬೆಂಗಳೂರು/ಮಂಗಳೂರು: ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿದೇರ್ಶನ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಜೊತೆ ಮಾತನಾಡಿದ ಖಾವಂದರು, ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ನಮ್ಮ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಹುಶಃ ಇದು ವಿಸ್ತಾರವಾಗಿ ಇಡೀ ದೇಶಕ್ಕೆ ತಲುಪುವ ಸಾಧ್ಯತೆ ಇದೆ ಎಂದರು.
Advertisement
Advertisement
ಕಸ್ಟಮರ್ಸ್ ಸರ್ವಿಸ್ ಸೆಂಟರ್ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಏಜೆನ್ಸಿ ಇದೆ. ಈಗಾಗಲೇ ನಾವು 6 ಸಾವಿರ ಸೆಂಟರ್ ಮಾಡಿದ್ದೇವೆ. ಸರ್ಕಾರದ ಯೋಜನೆಯಲ್ಲಿ 600 ಕಾರ್ಯಕ್ರಮ ಇದೆ. ಅದು ಈ ಜನತೆಗೆ ಗೊತ್ತೇ ಇಲ್ಲ ಎಂದು ಹೇಳಿದರು.
Advertisement
Advertisement
ರಾಸ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ ಎಂಬ ಯಾವುದೇ ಸುಳಿವು ನನಗೆ ಇರಲಿಲ್ಲ. ಪ್ರಧಾನಿಯವರು ಘೋಷಣೆ ಮಾಡುವ ಮೊದಲು ಒಬ್ಬರು ಕರೆ ಮಾಡಿ ನಿಮಗೆ ಈ ತರ ಒಂದು ಮೆಸೇಜ್ ಬರಬಹುದು ಅಂತ ಹೇಳಿದ್ರು ಅಷ್ಟೇ ಅಂದರು. ಯಾವತ್ತೂ ನಾನು ಯಾವುದರ ಹಿಂದೆ ಹೋದವನಲ್ಲ. ಬಂದಾಗೆಲ್ಲ ನಮ್ಮ ಕಾರ್ಯಕರ್ತರ ಸಂತಸ ಇಮ್ಮಡಿಯಾಗುತ್ತಿದೆ ಎಂದರು. ಇದನ್ನೂ ಓದಿ: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್
ಸಮುದಾಯಕ್ಕೆ ಮಹೋನ್ನತ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಹಾಗು ಅವರು ಆರೋಗ್ಯ,ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗುವ ಅವಕಾಶ ನನಗೆ ಒದಗಿತ್ತು. pic.twitter.com/KwoNdZyW6Z
— Narendra Modi (@narendramodi) July 6, 2022
ಇದೇ ಸಂದರ್ಭದಲ್ಲಿ ಧರ್ಮ, ನ್ಯಾಯ, ಸಮಾಜ ಸೇವೆ ಇವುಗಳು ಒಂದು ಕಡೆ ನಡೆಯುತ್ತಿದ್ದಾಗ ಜನರ ಗಮನ ಸೆಳೆದೇ ಸೆಳೆಯುತ್ತಿದೆ ಅನ್ನೋದಕ್ಕೆ ನೀವೇ ಸಾಕ್ಷಿ ಎಂದು ಹೆಚ್.ಆರ್ ರಂಗನಾಥ್ ಅವರು ಹೇಳಿದರು. ಆಗ ಹೆಗ್ಗಡೆಯವರು ಬಹಳ ಸಂತೋಷವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಸದ್ಯ ಧರ್ಮಾಧಿಕಾರಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕೇಂದ್ರ ಸರ್ಕಾರವು ಸಮಾಜ ಸೇವೆ ಕ್ಷೇತ್ರದಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕ್ರೀಡಾ ಕ್ಷೇತ್ರದಿಂದ ಕೇರಳದ ಮಾಜಿ ಅಥ್ಲಿಟ್ ಪಿಟಿ ಉಷಾ, ಸಿನಿಮಾ ಕ್ಷೇತ್ರದಿಂದ ಆಂಧ್ರಪ್ರದೇಶದ ಕೆ.ವಿ.ವಿಜಯೇಂದ್ರ ಪ್ರಸಾದ್ ಹಾಗೂ ಸಂಗೀತ ಕ್ಷೇತ್ರದಿಂದ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.