ಚಿಕ್ಕಮಗಳೂರು: ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ಅಲ್ಲದೆ ಇವರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ (ST Somashekhar) ಅಡ್ಡ ಮತದಾನದ ಕುರಿತು ಪ್ರತಿಕ್ರಿಯಿಸಿದ ಅವರು, ವ್ಯಕ್ತಿ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದಲ್ಲ. ಅವಕಾಶವಾದಿಗಳಿಗೆ ಸಪೋರ್ಟ್ ಮಾಡೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ. ಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗುತ್ತೇವೆ ಎಂದರು. ಇದನ್ನೂ ಓದಿ: ಸೋಮಶೇಖರ್ ವಿರುದ್ಧ ಸ್ಪೀಕರ್‌ಗೆ ದೂರು: ದೊಡ್ಡನಗೌಡ ಪಾಟೀಲ್
Advertisement
Advertisement
ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗ್ತಾರೆ. ಹಾರ್ಡ್ ಕೋರ್, ಸಿದ್ಧಾಂತಕ್ಕೆ ರಾಜಕಾರಣ ಮಾಡೋರು ನಿಷ್ಠೂರಕ್ಕೆ ಒಳಗಾಗುತ್ತಾರೆ. ಇಂಥವರು ನಮ್ಮ ಪಕ್ಷದ ಸಿಎಂ ಬೇರೆ ಪಕ್ಷದ ಸಿಎಂ ಬಳಿಯೂ ಚೆನ್ನಾಗಿರುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡೋದು ಶೂನ್ಯ ಸಹನೆ ಎಂದು ಸಿ.ಟಿ ರವಿ ಕಿಡಿಕಾರಿದರು.
Advertisement
ಎಸ್‌ಟಿಎಸ್ ಅಡ್ಡಮತದಾನ: ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಟಿ ಸೋಮಶೇಕರ್ ಅವರು ಅಡ್ಡಮತದಾನದ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಪರ ಮತ ಎಸ್‍ಟಿಎಸ್ ಚಲಾಯಿಸಿದ್ದಾರೆ. ಹೀಗಾಗಿ ಎಸ್‍ಟಿಎಸ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.