ಬೆಂಗಳೂರು: ರಾಜ್ಯಸಭೆ ಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮೇಲಾಟ ಜೆಡಿಎಸ್ ಪರದಾಟಕ್ಕೆ ಕಾರಣವಾಗಿದೆ. ನಾಲ್ಕನೇ ಗೆಲುವಿಗೆ ಮೂರು ಪಕ್ಷಗಳಿಗೂ ಸವಾಲಿದ್ದು, ಸದ್ಯಕ್ಕೆ ಬಿಜೆಪಿ ಮುಂದಿದೆ. ಹಾಗಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಈಗ ರಂಗು ಪಡೆದುಕೊಂಡಿದೆ. ಅವಿರೋಧ ಆಯ್ಕೆಯಾಗಬಹುದೆಂಬ ನಿರೀಕ್ಷೆಗಳು ಉಲ್ಟಾ ಹೊಡೆದಿದ್ದು, ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳು ಈಗ ಕಾದಾಟಕ್ಕೆ ನಿಂತಿವೆ. ಅಂದಹಾಗೆ ಈಗ ಇರುವ ಬಲಾಬಲದಂತೆ ಬಿಜೆಪಿಗೆ ಎರಡು ಸ್ಥಾನ, ಕಾಂಗ್ರೆಸ್‍ಗೆ ಒಂದು ಸ್ಥಾನ ಸುಲಭವಾಗಿ ದಕ್ಕಲಿದೆ. ಆದರೆ ನಾಲ್ಕನೇ ಸ್ಥಾನ ಗೆಲ್ಲಲು ಮೂರು ಪಕ್ಷಗಳ ಬಳಿ ಸ್ಪಷ್ಟವಾದ ಬಲ ಇಲ್ಲಂದಾಗಿತ್ತು. ಚದುರಂಗದಾಟ ಕುತೂಹಲ ಮೂಡಿಸಿದೆ. ಜೆಡಿಎಸ್‍ಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಿನ್ನೆಯೇ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರಿಂದ ನಾಮಪತ್ರ ಸಲ್ಲಿಸಿತ್ತು. ಈ ಬೆನ್ನಲ್ಲೇ ಇವತ್ತು ಬಿಜೆಪಿ ಕೂಡ ತನ್ನ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು ಮೇಲಾಟಕ್ಕೆ ವೇದಿಕೆ ಸಿದ್ಧಪಡಿಸಿದೆ. ಇದನ್ನೂ ಓದಿ: ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ವೀಡಿಯೋ ಸಂವಾದ
Advertisement
Advertisement
ಈ ನಡುವೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬಿಜೆಪಿ ಮೊದಲ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ಜಗ್ಗೇಶ್ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದರು. ಬಿಎಸ್‍ವೈ, ಬೊಮ್ಮಾಯಿ, ಕಟೀಲ್ ಸಾಥ್ ನೀಡಿ ಒಗ್ಗಟ್ಟು ಪ್ರದರ್ಶಿಸಿದರು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಶಾಸಕರು ಸಾಥ್ ನೀಡಿದರು. ಇನ್ನೊಂದೆಡೆ ಕಾಂಗ್ರೆಸ್ ನಡೆ ಬಗ್ಗೆ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ. ದೇವೇಗೌಡರು ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದಾರೆ. ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರ ಇಡುವುದಕ್ಕೆ ನಾವು ಕಾಂಗ್ರೆಸ್ ಬೆಂಬಲ ಕೇಳಿದ್ದೇವೆ. ಆದರೆ ಸಿದ್ದರಾಮಯ್ಯ ಯಾಕೆ ಎರಡನೇ ಅಭ್ಯರ್ಥಿ ಇಳಿಸಲು ಹಠ ಮಾಡಿದರು ಅಂತ ಗೊತ್ತಿಲ್ಲ ಅಂತ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಈ ನಡುವೆ ಅಶೋಕ್ ಮಾತನಾಡಿ ನಾವು ಕ್ರಾಸ್ ವೋಟ್ ಮಾಡಿಸಲ್ಲ. ಆದರೆ ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟು ಹಾಕಿಸಿದ್ದಾರೆ. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್
Advertisement
Advertisement
ಒಟ್ಟಾರೆ ರಾಜ್ಯಸಭೆ ಕಣ ಚದುರಂಗದಾಟಕ್ಕೆ ವೇದಿಕೆ ಒದಗಿಸಿದ್ದು, ಕಡೇ ಕ್ಷಣದಲ್ಲಿ ಯಾರು ಯಾವ್ ಪಾನ್ ವೂವ್ ಮಾಡುತ್ತಾರೆ ಎಂಬ ಕುತೂಹಲವಿದ್ದು, ಜೂನ್ 3ರೊಳಗೆ ಎಲ್ಲರ ಅಸಲಿ ಆಟ ಗೊತ್ತಾಗಲಿದೆ.