ನವದೆಹಲಿ: ರಾಜ್ಯಸಭೆಯ (Rajya Sabha) 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಬುಧವಾರ ಪ್ರಕಟಿಸಿದೆ.
ಏಪ್ರಿಲ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಈ ಸ್ಥಾನಗಳು ಖಾಲಿಯಾಗುತ್ತಿವೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ಸೇರಿದಂತೆ 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ತಡೆಯಲು ಮುಂದಾದ ಭಾರತ – ನದಿಗೆ ಅಡ್ಡಲಾಗಿ ಡ್ಯಾಂ ಸಿದ್ಧ
2026 ರ ಫೆಬ್ರವರಿ 26 ರಂದು ಅಧಿಸೂಚನೆಗಳನ್ನು ಹೊರಡಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಮತದಾನದ ದಿನದಂದೇ ಮತ ಎಣಿಕೆ ನಡೆಯಲಿದೆ. 37 ಸದಸ್ಯರ ಅವಧಿ ಏಪ್ರಿಲ್ 2026 ರಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಚುನಾವಣೆಗಳು ನಡೆಯುತ್ತಿವೆ.

