Bengaluru CityDistrictsKarnatakaLatestLeading NewsMain Post

ಬಿಜೆಪಿ ಜೊತೆ ಡೀಲ್, ಸಿದ್ದರಾಮಯ್ಯ ಬಣ್ಣ ಬಯಲಾಯ್ತು: ಹೆಚ್‌ಡಿಕೆ ಬಾಂಬ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ. ಅವರು ಬಿಜೆಪಿಯನ್ನು ಗೆಲ್ಲಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜ್ಯಸಭಾ ಚುನಾವಣೆ ಹಿನ್ನೆಲೆ ಮಾತನಾಡಿದ ಕುಮಾರಸ್ವಾಮಿ, ಸಿಟಿ ರವಿ ಕಾಂಗ್ರೆಸ್ ಕಚೇರಿಗೆ ಧನ್ಯವಾದ ತಿಳಿಸಿಲು ತೆರಳಿದ್ದರು. ಬಿಜೆಪಿ ಬಿ ಟೀಂ ಯಾವುದು ಎಂಬುದು ಈಗ ಗೊತ್ತಾಗಿದೆ. ಈಶ್ವರಪ್ಪ ಅವರು ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬಣ್ಣ ಬಯಲಾಗಿದೆ ಎಂದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ, ಖೆಡ್ಡಾಗೆ ಬಿದ್ದಿದ್ದಾರೆ. ಇನ್ನೊಂದು ನಾಚಿಕೆಗೇಡಿನ ವಿಷಯ ಎಂದರೆ, ಪತ್ರ ಬರೆದಿದ್ದಾರೆ ಹಾಗೂ ಟ್ವೀಟ್ ಮಾಡಿ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯನ್ನು ಗೆಲ್ಲಿಸಲು ಹೊರಟಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರೆಲ್ಲಾ ನಕಲಿ ಕಾಂಗ್ರೆಸಿನವರು, ನಕಲಿ ಜಾತ್ಯತೀತ. 2ನೇ ಪ್ರಾಶಸ್ತ್ಯದ ಮತ ಕೂಡಾ ಹಾಕಬೇಡಿ ಎಂದು ಹೇಳಿದ್ದಾರೆ. ಶ್ರೀನಿವಾಸ್ ಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತೇನೆ ಎಂದಿದ್ದಾರೆ ಹಾಗೂ ರಮೇಶ್ ಕುಮಾರ್ ಬ್ರೈನ್ ವಾಶ್ ಮಾಡಿದ್ದಾರೆ. ಇದು ಹೆಸರಿಗೆ ಮಾತ್ರ ಪಕ್ಷಾಂತರ ನಿಷೇಧ, ಈ ನಿಯಮ ಯಾವುದೇ ಉಪಯೋಗಕ್ಕೂ ಬರುವುದಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿಟಿ ರವಿ!

HDK

ಈ ಬಾರಿ ಜೆಡಿಎಸ್ ಪಕ್ಷ ಮತ್ತೆ ಪುಟಿದು ನಿಲ್ಲುತ್ತದೆ. 31 ಶಾಸಕರು ನಮ್ಮ ಅಭ್ಯರ್ಥಿಗೆ ಮತ ಹಾಕುತ್ತಾರೆ. 32ರ ಪೈಕಿ 31 ಮತ ನಮಗೆ ಬರಲಿದೆ. ಈ ಬಗ್ಗೆ ನನಗೆ ಯಾವುದೇ ಸಂಶಯ ಇಲ್ಲ ಎಂದರು.

ಕಳೆದ ಬಾರಿ ಅಡ್ಡ ಮತದಾನ ಮಾಡಿದವರಿಗೆ ಜನ ಪಾಠ ಕಲಿಸಿದ್ದಾರೆ. ಈಗಲೂ ಅವರಿಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ನವರಿಗೆ ಹೊಸ ಅಧ್ಯಾಯ ಶುರು ಮಾಡೋಣ ಎಂದು ಹೇಳಿದ್ದೆ, ಆದರೆ ಅವರು ಒಪ್ಪಲಿಲ್ಲ. ಅವರಿಗೆ ಜಾತ್ಯತೀತ ಪಕ್ಷಗಳು ಉಳಿಯುವುದು ಇಷ್ಟ ಇಲ್ಲ. ಈಗ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇನ್ನು ಮುಂದೆ ನಾವು ಅವರೊಂದಿಗೆ ಹೋಗಲ್ಲ. ಸ್ವತಂತ್ರ್ಯವಾಗಿಯೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button