ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಒಂದು ರಾಜ್ಯಸಭೆ (Rajya Sabha) ಸ್ಥಾನಕ್ಕೆ ಇಂದು ಭಾರೀ ಹೈಡ್ರಾಮಾ ನಡೆದಿದ್ದು ಬಿಜೆಪಿ (BJP) ಜಯಗಳಿಸಿದೆ. 9 ಶಾಸಕರು ಕಾಂಗ್ರೆಸ್ಸಿಗೆ (Congress) ಕೈಕೊಟ್ಟ ಕಾರಣ ಅಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ಸಿನ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi ) ಸೋಲನುಭವಿಸಿದ್ದಾರೆ.
ರಾಜ್ಯಸಭಾ ಚುನಾವಣೆಯ ಸೋಲಿನಿಂದಾಗಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಪತನದ ಅಂಚಿನಲ್ಲಿದೆ.
Advertisement
#WATCH | Rajya Sabha Elections | Himachal Pradesh CM Sukhvinder Singh Sukhu says, "The manner in which the counting has begun and Opposition leaders are threatening the polling officers again and again is not right for democracy…They had halted the counting for long. I urge the… pic.twitter.com/FffPrwABDv
— ANI (@ANI) February 27, 2024
Advertisement
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ, ವಿಶ್ವಾಸಮತ ಯಾಚಿಸುವಂತೆ ಸಿಎಂ ಸುಕ್ಕುಗೆ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ (Jairam Thakur) ಆಗ್ರಹಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ, 68 ಸ್ಥಾನಗಳಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದರೆ ಬಿಜೆಪಿ 25 ಸ್ಥಾನ ಗೆದ್ದುಕೊಂಡಿತ್ತು. ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
Advertisement
#WATCH | Rajya Sabha elections | Himachal Pradesh LoP Jairam Thakur says, "Despite having such a huge majority, Congress lost the Rajya Sabha seat…I congratulate Harsh Mahajan once again…" pic.twitter.com/wTRzlEiUlK
— ANI (@ANI) February 27, 2024
Advertisement
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಬಿಜೆಪಿ ಹರ್ಷ ಮಹಾಜನ್ ಅವರನ್ನು ಕಣಕ್ಕಿಳಿಸಿತ್ತು. ಹಲವು ಕಾಂಗ್ರೆಸ್ ಶಾಸಕರು ಸಿಂಘ್ವಿ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದರು. ವಿಶ್ವಾಸಮತ ಯಾಚನೆಗೆ ಮುಂದಾದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಸಿಂಘ್ವಿ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಚುನಾವಣೆಗೂ ಮುನ್ನ ತಮ್ಮೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದರು.