ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಇನ್ನೊಂದೆ ದಿನ ಬಾಕಿ ಇದ್ದು ರಾಜಕೀಯ ಜೋರಾಗಿದೆ. ಅಡ್ಡ ಮತದಾನದ ಆಸೆಯಲ್ಲಿ ದೋಸ್ತಿ ಪಾರ್ಟಿ ಇದ್ದರೆ ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ (Congress) ಪ್ಲಾನ್ ಮಾಡಿದೆ. ಕಾಂಗ್ರೆಸ್‌ಗೆ ಶಾಸಕರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದ್ದರೆ ಜೆಡಿಎಸ್ (JDS) ಪಾಲಿಗೆ ಶಾಸಕರನ್ನು ಸೆಳೆಯಬೇಕಾದ ಅನಿವಾರ್ಯತೆಯಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದ್ದು ಐವರು ಕಣದಲ್ಲಿ ಇರುವುದರಿಂದ ಈಗ ಈ ಚುನಾವಣೆ ಕುತೂಹಲಕಾರಿ ಘಟ್ಟ ತಲುಪಿದೆ. ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್, ಡಾ| ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ.
Advertisement
ಕುಪೇಂದ್ರ ರೆಡ್ಡಿಗೆ (Kupendra Reddy) ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ ಇದನ್ನೂ ಓದಿ: 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್ ಸೇತುವೆ ಉದ್ಘಾಟನೆ
Advertisement
Advertisement
ಕಾಂಗ್ರೆಸ್‌ನ ಎಲ್ಲ 135 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಾರೆ. ಒಂದು ವೇಳೆ ಅಡ್ಡ ಮತದಾನವಾದರೆ (Cross Vote) ಲೆಕ್ಕಾಚಾರ ಬುಡಮೇಲಾಗುತ್ತದೆ.
Advertisement
ಗೆಲುವಿಗೆ ಎಷ್ಟು ಮತಗಳು ಬೇಕು?
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ದಾರೆ. ಈ ಶಾಸಕರು ಸರಿಯಾಗಿ ಮತ ಹಾಕಿದರೆ ತಲಾ 45 ಮತಗಳು ಬೀಳುವುದರಿಂದ ಮೂವರು ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ. ಬಿಜೆಪಿಯಲ್ಲಿ 66 ಮತಗಳು ಇದ್ದರೆ ಜೆಡಿಎಸ್‌ನಲ್ಲಿ 19 ಮತಗಳು ಇದೆ. ಇದನ್ನೂ ಓದಿ: ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?
ಕಾಂಗ್ರೆಸ್ ಲೆಕ್ಕಾಚಾರ ಏನು?
ಬಿಜೆಪಿಯ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಜೆಡಿಎಸ್ ಶರಣಗೌಡ ಕಂದಕೂರು ಅವರು ಚುನಾವಣೆಗೆ ಗೈರಾದರೆ ಅಥವಾ ಅಡ್ಡ ಮತದಾನ ಮಾಡಿದರೆ ಅನುಕೂಲ ಎಂಬ ಲೆಕ್ಕಾಚಾರವನ್ನು ಹಾಕಿದೆ. ಇದೇ ಲೆಕ್ಕಾಚಾರದಲ್ಲಿ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಬಿಜೆಪಿ ಮೈತ್ರಿ ಲೆಕ್ಕಾಚಾರ ಏನು?
ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ದರ್ಶನ್ ಪುಟ್ಟಣ್ಣಯ್ಯ ಅಡ್ಡ ಮತದಾನ ಮಾಡಿದರೆ ಅಥವಾ ಚುನಾವಣೆಗೆ ಗೈರಾದರೆ ಅನುಕೂಲ ಎಂಬ ಲೆಕ್ಕಾಚಾರ ಹಾಕಿಕೊಂಡಿದೆ. ಜಾರಿ ನಿರ್ದೇಶನಾಲಯ (ED) ಇಕ್ಕಳದಲ್ಲಿ ಸಿಲುಕಿರುವ ಮಾಲೂರು ಶಾಸಕ ನಂಜೇಗೌಡ ಹಾಗೂ ಬಳ್ಳಾರಿಯ ನಾರಾ ಭರತ್ ರೆಡ್ಡಿ ಕೊನೆಕ್ಷಣದಲ್ಲಿ ದೋಸ್ತಿಗೆ ಏನಾದರೂ ಬೆಂಬಲ ನೀಡಿದರೆ ಮೈತ್ರಿ ಅಭ್ಯರ್ಥಿಗೆ ನೆರವಾಗಲಿದೆ.
ರೆಡ್ಡಿ ಮತ ಯಾರಿಗೆ?
ಜನಾರ್ದನ ರೆಡ್ಡಿ ಮತ ಯಾರಿಗೆ ಎನ್ನುವುದೇ ಸದ್ಯದ ಕುತೂಹಲ. ಕಾಂಗ್ರೆಸ್ ನಾಯಕರ ಜೊತೆಗೆ ರೆಡ್ಡಿಗೆ ಉತ್ತಮ ಸಂಪರ್ಕವಿದೆ. ಅದೇ ರೀತಿ ಬಿಜೆಪಿ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ.