ಬೆಂಗಳೂರು: ರಾಜ್ಯಸಭೆ ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಬಿಜೆಪಿ ಭರ್ಜರಿ ಲೆಕ್ಕಾಚಾರ ಹಾಕಿದೆ. ಸಂಖ್ಯೆ 19 ರಲ್ಲಿ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿನ ಸೀಕ್ರೆಟ್. ಸಂಖ್ಯೆ 19ರ ಆಧಾರದಲ್ಲಿ ಮೂರನೇ ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸಿದೆ.
ಏನಿದು ಸಂಖ್ಯೆ 19ರ ಸೀಕ್ರೆಟ್??
ಬಿಜೆಪಿ ಬಳಿ ಒಟ್ಟು ಇರುವ ಶಾಸಕರ ಸಂಖ್ಯೆ 122. ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ತಲಾ 45 ಶಾಸಕರಿಂದ ಮೊದಲ ಪ್ರಾಶಸ್ತ್ಯ ಮತ ಹಾಕಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
Advertisement
ಒಬ್ಬ ಶಾಸಕನ 1 ಮತ 100 ಮತಗಳ ಮೌಲ್ಯಕ್ಕೆ ಸಮ. ಈ ಲೆಕ್ಕಾಚಾರದಲ್ಲಿ 45 ಮತಗಳು ಅಂದರೆ 4,500 ಮತಗಳ ಮೌಲ್ಯ ಆಗಲಿದೆ. ಆದರೆ ಒಬ್ಬ ರಾಜ್ಯಸಭೆ ಅಭ್ಯರ್ಥಿ ಗೆಲ್ಲುವುದಕ್ಕೆ ಕರಾರುವಕ್ಕಾಗಿ ಬೇಕಾಗುವ ಮತಗಳ ಮೌಲ್ಯ 4,481.
Advertisement
Advertisement
ಮೊದಲೆರಡು ಅಭ್ಯರ್ಥಿಗಳಿಗೆ ಚಲಾವಣೆಯಾದ ಒಟ್ಟು 4,500 ಮತ ಮೌಲ್ಯಗಳಲ್ಲಿ 4,481 ಕಳೆದರೆ ಉಳಿಯುವು ಸಂಖ್ಯೆ 19. ಅಲ್ಲಿಗೆ ನಿರ್ಮಲಾ ಸೀತಾರಾಮನ್ 4,481 ಮತ್ತು ಜಗ್ಗೇಶ್ ಅವರಿಗೆ 4,481 ಮತ ಮೌಲ್ಯಗಳು ಸಿಕ್ಕಿದ ಮೇಲೆ ಅವರಿಬ್ಬರ ಗೆಲುವು ಖಚಿತವಾಗುತ್ತದೆ. ಇವರಿಬ್ಬರಿಂದ ಉಳಿಯುವ 19+19 ಅಂದರೆ 38 ಮತಗಳು ಲೆಹರ್ ಸಿಂಗ್ ಗೆಲ್ಲಿಸಲು ಸಹಕಾರಿ ಆಗಲಿವೆ.
Advertisement
ಬಿಜೆಪಿಯ ಬಳಿ 32 ಉಳಿಕೆ ಮತಗಳು ಈಗಾಗಲೇ ಇದೆ. 32 ಮತಗಳು ಅಂದ್ರೆ ಮತಗಳ ಮೌಲ್ಯ 3,200. 3,200ಕ್ಕೆ 38 ಕೂಡಿಸಿದರೆ 3,238 ಆಗಲಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಗೆ 32 ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ 25 ಮೊದಲ ಪ್ರಾಶಸ್ತ್ಯದ ಮತಗಳು ಸಿಕ್ಕಿರುತ್ತವೆ. ಇದನ್ನೂ ಓದಿ: ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ – ಶಾಸಕರು ರೆಸಾರ್ಟ್‌ಗೆ ಶಿಫ್ಟ್?
ಈ ವೇಳೆ ಮತಗಳ ಎಣಿಕೆಯಲ್ಲಿ ಕನಿಷ್ಟ ಮತಗಳನ್ನು ಪಡೆದಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಎಣಿಕೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ. ಈಗ ಕಣದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉಳಿದಿರುತ್ತಾರೆ. ಲೆಹರ್ ಸಿಂಗ್‌ಗೆ 3,238 ಕುಪೇಂದ್ರ ರೆಡ್ಡಿಗೆ 3,200 ಮತಗಳ ಮೌಲ್ಯ ಸಿಕ್ಕಿರುತ್ತದೆ. ಮತಗಳ ಮೌಲ್ಯದಲ್ಲಿ ಲೆಹರ್ ಸಿಂಗ್ ಮುಂದಿರುತ್ತಾರೆ. ಆಗ ಸಹಜವಾಗಿ ಹೆಚ್ಚು ಮತಗಳ ಮೌಲ್ಯಗಳ ಪಡೆದ ಲೆಹರ್ ಸಿಂಗ್ ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ.