ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ರಾಜ್ಯಸಭೆ ಚುನಾವಣೆ ಹಿನ್ನೆಲೆ ಸಿಎಲ್‍ಪಿ ಸಭೆ ನಡೆಸಿದ ಅವರು, ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಆಗಬಾರದು. ಒಂದೇ ಒಂದು ಮತ ಅಡ್ಡಮತದಾನವಾದರೂ ಹುಷಾರ್.. ನಾನು ಬದುಕಿರುವವರೆಗೂ ನಿಮಗೆ `ಬಿ ಫಾರಂ’ ಸಿಗದಂತೆ ನೋಡಿಕೊಳ್ಳುತ್ತೇನೆ. ಯಾರು ಅಡ್ಡ ಮತದಾನ ಮಾಡುತ್ತಾರೋ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡರ ಕುಟುಂಬದರಿಗೆ ಸಾಲ ಕೊಟ್ಟಿರುವ ಕುಪೇಂದ್ರ : ಪಟ್ಟಿಯಲ್ಲಿ ದಾಖಲು
Advertisement
Advertisement
ಪಕ್ಷದ ಅಧಿಕೃತ ಏಜೆಂಟ್ ಆಗಿ ಡಿಕೆಶಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್‍ನ ಪ್ರತಿ ಶಾಸಕರು ಸಹ ಡಿ.ಕೆ.ಶಿವಕುಮಾರ್‌ಗೆ ಮತ ಪತ್ರ ತೋರಿಸಿಯೇ ಮತದಾನ ಮಾಡಬೇಕಾಗಿದೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಮತದಾನ – ಯಾರ ಪಾಲಾಗಲಿದೆ ನಾಲ್ಕನೇ ಸ್ಥಾನ?