ನವದೆಹಲಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆಯಾಗಿದೆ. ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ (Abhishek Manu Singhvi) ಸೀಟಿನಲ್ಲಿ ಹಣದ ನೋಟುಗಳು ಸಿಕ್ಕಿವೆ.
ರಾಜ್ಯಸಭೆಯ (Rajya Sabha) ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿವೆ. ನಿನ್ನೆ ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿದೆ. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದರು. ಇದನ್ನೂ ಓದಿ: ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ?
ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ (Jagdeep Dhankar) ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದರು.
ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಮೂವರು ಸಾವು, 20ಕ್ಕೂ ಅಧಿಕ ಜನ ಅಸ್ವಸ್ಥ