ಯಾದಗಿರಿ: ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಬದಲಾವಣೆ ಎನ್ನುವುದು ಒಂದು ಅಂಟು ರೋಗವಾಗಿದೆ. ನನಗೂ ಸಿಎಂ ಆಗುವ ಆಸೆಯಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದ್ದಾರೆ.
ಜಿಲ್ಲೆಯ ಕಕ್ಕೆರಿಯಲ್ಲಿ ಮಾತನಾಡಿದ ಅವರು, ನಾನು ಸಮರ್ಥ ಅಂತ ಜನರಿಗೆ ಗೊತ್ತಾದಾಗ ಜನರು ನನ್ನ ಸಿಎಂ ಮಾಡ್ತಾರೆ. ಅದಕ್ಕೆ ಅನುಭವ, ವಯಸ್ಸು ಎಲ್ಲ ಬೇಕು. ಆದರೆ ನನಗೆ ದುರಾಸೆ ಇಲ್ಲ. ನಮ್ಮ ಸಿಎಂ ಬಸವರಾಜ್ ಬೊಮ್ಮಾಯಿಯವರೇ ಎನ್ನುವ ಮೂಲಕ ಸ್ವಪಕ್ಷದವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಈ ಪರಿಸ್ಥಿತಿ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ: ಈಶ್ವರ್ ಖಂಡ್ರೆ
Advertisement
Advertisement
ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಹತ್ತಿರದಿಂದ ಬಲ್ಲೆ. ತಮ್ಮ ಕ್ಷೇತ್ರಕ್ಕೆ ಹೋದಾಗಲೆಲ್ಲ ಬಹಳ ಪ್ರೀತಿ, ಭಾವನಾತ್ಮಕವಾಗಿ ಮಾತನಾಡುತ್ತಾರೆ. ಅವರು ಮಾತನಾಡಿರುವುದಕ್ಕೂ ಸಿಎಂ ಬದಲಾವಣೆ ವದಂತಿಗೂ ಸಂಬಂಧವಿಲ್ಲ. ಸಿಎಂ ಬದಲಾವಣೆ ಅಂತ ನಮ್ಮ ಪಕ್ಷದ ಕೆಲವರು ಮತ್ತು ವಿರೋಧ ಪಕ್ಷದವರು ಗುಸುಗುಸು ಮಾತನಾಡುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ ಅಂತ ಸ್ವತಃ ಅಮಿತ್ ಶಾ ಅವರೇ ಹೇಳಿದ್ದಾರೆ ಎಂದಿದ್ದಾರೆ.
Advertisement
Advertisement
ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರಾಗುತ್ತಾರೆ ಎಂಬ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಮಾತನಾಡುವ ಸಂದರ್ಭವೇ ಅಲ್ಲ. ವೇದಿಕೆ ಮೇಲೆ ಯಾರನ್ನೋ ಖುಷಿಪಡಿಸಲು ಹೋಗಿ ಏನೋ ಅರ್ಥ ಆಗುತ್ತದೆ. ನಿರಾಣಿಯವರು ಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿಗಳಿದ್ದರು ನಿಜ. ಆದರೆ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. ಈಗಾಗಲೇ ನಮ್ಮ ಪಕ್ಷದ ಹೈಕಮಾಂಡ್ ಅನಾವಶ್ಯಕ ಮಾತುಗಳನ್ನು ಆಡದಂತೆ ಖಡಕ್ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ