CinemaDistrictsKarnatakaLatestSandalwood

ಫಸ್ಟ್ ರ‍್ಯಾಂಕ್‌ ರಾಜು ಅಲ್ಲ ಈಗ ಇವ್ರು ‘ರಾಜು ಜೇಮ್ಸ್ ಬಾಂಡ್’

ಸ್ಟ್ ರ‍್ಯಾಂಕ್‌ ರಾಜು ಮೂಲಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ಮಿಂಚು ಹರಿಸಿದ ನಟ ಗುರುನಂದನ್. ರಾಜು ಕನ್ನಡ ಮೀಡಿಯಂ ಮೂಲಕ ಪ್ರೇಕ್ಷಕ ಪ್ರಭುಗಳಿಗೆ ಇನ್ನಷ್ಟು ಹತ್ತಿರವಾದರು. ಮಿಸ್ಸಿಂಗ್ ಬಾಯ್ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಚಂದನವನದ ಭರವಸೆಯ ಹಾಗೂ ಪ್ರತಿಭಾನ್ವಿತ ನಟರಲ್ಲೊಬ್ಬರಾಗಿ ಛಾಪು ಮೂಡಿಸಿದ್ದಾರೆ. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಪ್ರತಿ ಸಿನಿಮಾದಲ್ಲೂ ಗೆಲುವನ್ನು ತಮ್ಮದಾಗಿಸಿಕೊಂಡಿರುವ ಲಕ್ಕಿ ಬಾಯ್ ಅಂದ್ರೆ ತಪ್ಪಾಗೋದಿಲ್ಲ. ಇದೀಗ ರಾಜು ಜೇಮ್ಸ್ ಬಾಂಡ್ ಅವತಾರ ತಾಳಿರುವ ಗುರುನಂದನ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಾಜು ಜೇಮ್ಸ್ ಬಾಂಡ್ ಸಿನಿಮಾ ತಂಡ ಬರ್ತ್‍ಡೇ ಟೀಸರ್ ಬಿಡುಗಡೆ ಮಾಡಿದೆ. ಅಮೆರಿಕ ಕನ್ನಡಿಗರು ಈ ಬರ್ತ್‍ಡೇ ಟೀಸರ್ ಬಿಡುಗಡೆ ಮಾಡುವ ಮೂಲಕ ಗುರುನಂದನ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದು, ಚಿತ್ರತಂಡಕ್ಕೂ ಶುಭ ಹಾರೈಸಿದ್ದಾರೆ. ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು ಗುರುನಂದನ್ ರಾಯಲ್ ಬಾಂಡ್ ಅವತಾರ ನೋಡಿ ಅವರ ಅಭಿಮಾನಿ ಬಳಗ ಹಾಗೂ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ. ದನ್ನೂ ಓದಿ:  ಪತಿಗೆ ರೊಮ್ಯಾಂಟಿಕ್ ಕಿಸ್ ಕೊಟ್ಟ ಶ್ರಿಯಾ ಶರಣ್ – ಫೋಟೋ ವೈರಲ್

Raju James Bond
2019ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕರ್ಮ ಬ್ರೋಸ್ ಪ್ರೊಡಕ್ಷನ್ ಬ್ಯಾನರ್ ನಡಿ ಮಂಜುನಾಥ್ ವಿಶ್ವಕರ್ಮ, ಕಿರಣ್ ಬರ್ತೂರ್ ನಿರ್ಮಾಪಕರು. ಅದ್ದೂರಿಯಾಗಿ ಮೂಡಿ ಬರುತ್ತಿರುವ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಕ್ಯಾಮೆರಾವರ್ಕ್, ಅಮಿತ್ ಜವಾಲ್ಕರ್ ಸಂಕಲವಿದೆ.  ದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

ಕಾಮಿಡಿ ಡ್ರಾಮ ಸಬ್ಜೆಕ್ಟ್ ಒಳಗೊಂಡಿರುವ ಈ ಚಿತ್ರದಲ್ಲಿ ಗುರುನಂದನ್ ಜೋಡಿಯಾಗಿ ಮೃದುಲಾ ತೆರೆ ಹಂಚಿಕೊಂಡಿದ್ದಾರೆ. ಬಹಳ ನಿರೀಕ್ಷೆ, ಭರವಸೆಯೊಂದಿಗೆ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಚಂದನವನದ ಖ್ಯಾತ ತಾರೆಯರ ಕಲಾಬಳಗವಿದೆ. ಸಾಧು ಕೋಕಿಲ, ಜೈ ಜಗದೀಶ್, ರವಿಶಂಕರ್, ಚಿಕ್ಕಣ್ಣ, ಅಚ್ಯುತ್ ಕುಮಾರ್, ತಬಲ ನಾಣಿ, ಮಂಜುನಾಥ್ ಹೆಗ್ಡೆ, ವಿಜಯ್ ಚೆಂದೂರ್ ಒಳಗೊಂಡ ಕಲರ್ ಫುಲ್ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದೆ ರಾಜು ಜೇಮ್ಸ್ ಬಾಂಡ್ ಚಿತ್ರತಂಡ.

Leave a Reply

Your email address will not be published.

Back to top button