– ಇನ್ನೊಂದೇ ವರ್ಷದಲ್ಲಿ ನೆಕ್ಸ್ಟ್ ಜನರೇಷನ್ ʻಬ್ರಹ್ಮೋಸ್ʼ ಮಿಸೈಲ್ ಸಿದ್ಧ
ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿರುವ ಹೊತ್ತಿನಲ್ಲೇ ಭಾರತ ರಕ್ಷಣಾ ವಲಯದ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಂದು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಡಿಫೆನ್ಸ್ ಕಾರಿಡಾರ್‌ನಲ್ಲಿ ನಿರ್ಮಿಸಲಾಗಿರುವ ʻಬ್ರಹ್ಮೋಸ್ʼ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು (BrahMos Production Unit) ವರ್ಚುವಲ್ ಮೂಲಕ ಉದ್ಘಾಟಿಸಿದರು.
आज जिस ब्रह्मोस फैसिलिटी का उद्घाटन हम कर रहे हैं, इस फैसिलिटी की शुरुआत से ही लगभग 500 Direct और 1000 Indirect रोजगार सृजित होंगे, यह भी कहीं न कहीं उस इकोसिस्टम के कारण ही संभव हो पाया है, जो श्री योगी आदित्यनाथ जी ने यहां डेवलप किया है: माननीय रक्षा मंत्री श्री @rajnathsingh… pic.twitter.com/ThHlQJb0pA
— Yogi Adityanath (@myogiadityanath) May 11, 2025
ರಕ್ಷಣಾ ವಲಯದ ಸಾಮರ್ಥ್ಯ ಹೆಚ್ಚಿಸಲು ನಿರ್ಮಿಸಲಾಗಿರುವ ಈ ಘಟಕವು ವಾರ್ಷಿಕವಾಗಿ 80 ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್’ (BrahMos) ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ
आज जो ब्रह्मोस फैसिलिटी शुरू हो रही है, मैं समझता हूं, वह यूपी डिफेंस कॉरिडोर का गौरव होगा। यह सिर्फ उत्तर प्रदेश का ही नहीं, बल्कि देश का सबसे बड़ा ब्रह्मोस Integration and Testing Facility Center है।
यह रक्षा क्षेत्र में भारत की आत्मनिर्भरता के प्रयास को भी मजबूती प्रदान… pic.twitter.com/DqbJibC1gE
— Yogi Adityanath (@myogiadityanath) May 11, 2025
2018ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಕ್ಷಣಾ ಕೈಗಾರಿಕಾ ಕಾರಿಡಾರ್ ಉಪಕ್ರಮದ ಭಾಗವಾಗಿ ಉತ್ಪಾದನಾ ಘಟಕವನ್ನು ಘೋಷಿಸಲಾಯಿತು. ಇದಕ್ಕೆ 2021 ರಲ್ಲಿ ಅಡಿಪಾಯ ಹಾಕಲಾಗಿತ್ತು. ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ.
लगभग ₹30,000 करोड़ का निवेश उत्तर प्रदेश के अंदर डिफेंस सेक्टर में होने जा रहा है… pic.twitter.com/tEdHQ3BAgl
— Yogi Adityanath (@myogiadityanath) May 11, 2025
ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು 3 ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್
ಈ ಘಟಕದಲ್ಲಿ ಬ್ರಹ್ಮೋಸ್ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್
1 ವರ್ಷದಲ್ಲಿ ನೆಕ್ಸ್ಟ್ ಜನರೇಷನ್ ಮಿಸೈಲ್ ಸಿದ್ಧ:
ಸದ್ಯಕ್ಕೆ ವಾರ್ಷಿಕವಾಗಿ 80 ರಿಂದ 100 ಬ್ರಹ್ಮೋಸ್ ಮಿಸೈಲ್ ತಯಾರಿಸುವ ಗುರಿಯನ್ನು ಘಟಕ ಹಾಕಿಕೊಂಡಿದೆ. ಜೊತೆಗೆ ಇನ್ನೊಂದು ವರ್ಷದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ ಸಿದ್ಧಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿ 2,900 ಕೆಜಿ ತೂಗುತ್ತದೆ. ಆದ್ರೆ ಮುಂದಿನ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿ 1,290 ಕೆಜಿ ತೂಕ ಹೊಂದಿರಲಿದ್ದು, ದಾಳಿಯ ವ್ಯಾಪ್ತಿಯು 300 ಕಿಮೀ ಗಿಂತಲೂ ಹೆಚ್ಚಿರಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Ceasefire | ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್ ಆಗ್ರಹ
ಪಾಕ್‌ಗೆ ನಡುಕ ಶುರುವಾಗಿದ್ದೇಕೆ?
2022ರ ಮಾರ್ಚ್ 9ರ ಸಂಜೆಯ ವೇಳೆ ಹರಿಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: ಪಾಕ್‌ನ ಶೆಲ್ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು