ಉಲಾನ್‍ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಲ್ಲಿನ ಅಧ್ಯಕ್ಷ ಬಿಳಿ ಕುದುರೆಯನ್ನು ಉಡುಗೊರೆಯಾಗಿ ನೀಡಿದರು.
ಈ ಬಗ್ಗೆ ರಾಜ್‍ನಾಥ್‍ಸಿಂಗ್(Rajnath Singh) ಟ್ವೀಟ್ ಮಾಡಿದ್ದು, ಮಂಗೋಲಿಯಾದ(Mongolia) ಸ್ನೇಹಿತರಿಂದ ವಿಶೇಷ ಉಡುಗೊರೆ ಬಂದಿದೆ. ಕುದುರೆಗೆ(Horse) ತೇಜಸ್ ಎಂದು ಹೆಸರಿಡಲಾಗಿದೆ. ಇದನ್ನು ಉಡುಗೊರೆಯಾಗಿ ನೀಡಿದ ಮಂಗೋಲಿಯಾದ ಅಧ್ಯಕ್ಷ ಎಚ್‍ಇಯು ಖುರೆಲ್‍ಸುಖ್‍ಗೆ(H.E.U. Khurelsuk) ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ
Advertisement
A special gift from our special friends in Mongolia. I have named this magnificent beauty, ‘Tejas’.
Thank you, President Khurelsukh. Thank you Mongolia. pic.twitter.com/4DfWF4kZfR
— Rajnath Singh (@rajnathsingh) September 7, 2022
Advertisement
ಭೇಟಿ ಸಂದರ್ಭದಲ್ಲಿ ಮಂಗೋಲಿಯಾ ಅಧ್ಯಕ್ಷರೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಚರ್ಚಿಸಲಾಯಿತು. ರಾಜನಾಥ್ ಸಿಂಗ್ ಅವರು ಮಂಗೋಲಿಯಾ ದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವರೆನಿಸಿಕೊಂಡಿದ್ದಾರೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಹೇಗಿದೆ?- 144 ಕ್ಷೇತ್ರಗಳ ಮೇಲೆ ಮೋದಿ ಕಣ್ಣು