– ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಶ್ರೀನಗರ: ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಪಾರ್ಥಿಕ ಶರೀರಕ್ಕೆ ಕೇಂದ್ರ ಗೃಹ ಸಚಿವರಾದ ರಾಜ್‍ನಾಥ್ ಸಿಂಗ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸಲು ಸಚಿವರು ಜಮ್ಮ ಕಾಶ್ಮೀರದ ಬದ್ಗಾಮ್‍ಗೆ ಆಗಮಿಸಿದ್ದರು. ರಾಜ್‍ನಾಥ್ ಸಿಂಗ್ ಅವರಿಗೆ ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿ ದಿಲ್‍ಬಾಗ್ ಸಿಂಗ್ ಸಾಥ್ ನೀಡಿದರು. ಈ ವೇಳೆ ಸ್ವತಃ ರಾಜ್‍ನಾಥ್ ಸಿಂಗ್ ಹಾಗೂ ದಿಲ್‍ಬಾಗ್ ಸಿಂಗ್ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.
Advertisement
Advertisement
ಕೆಲ ಕಾಲ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಸೇನಾ ಗೌರವ ನೀಡಿದ ಬಳಿಕ ಯೋಧರ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ವಾಯುನೆಲೆಗೆ ಕೊಂಡ್ಯೊಲಾಯಿತು. ಆ ಬಳಿಕ ಯೋಧರ ಸ್ವಗ್ರಾಮಗಳಿಗೆ ಮೃತ ಶರೀರವನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.
Advertisement
ಈ ದಾಳಿಯ ಪ್ರತೀಕಾರ ತೀರಿಸಿಯೇ ತೀರಿಸುತ್ತೇವೆ ಎಂದು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ ರಾಜ್‍ನಾಥ್ ಸಿಂಗ್ ಅವರು, ವೀರ ಭೂಮಿಯಲ್ಲಿ ಹುಟ್ಟಿದ, ವೀರ ಯೋಧರ ಕಾಣಿಕೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement
Budgam: Union Ministers Rajnath Singh and J&K DGP Dilbagh Singh lend a shoulder to mortal remains of a CRPF soldier. #PulwamaAttack pic.twitter.com/hF5CmYb1yR
— ANI (@ANI) February 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv