ದೂರು ಕೊಟ್ಟ ರಾಜಕುಮಾರ ನನ್ನ ಗಂಡ – ಕಾಂಗ್ರೆಸ್‌ ಕಾರ್ಯಕರ್ತೆ ನವ್ಯಶ್ರೀ

Public TV
2 Min Read
BGK

ಬೆಳಗಾವಿ: ತೋಟಗಾರಿಕೆ ಇಲಾಖೆಯ ರಾಜಕುಮಾರ ಟಾಕಳೆ ನನ್ನ ಗಂಡ ಅವನಿಂದ ನನಗೆ ಏನು ಮೋಸ ಆಗಿದೆ. ಮುಂದಿನ ದಿನಗಳಲ್ಲಿ ಮೋಸ ಹೇಗಾಯ್ತು ಎಂಬುದನ್ನು ಹೇಳುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಕಾಂಗ್ರೆಸ್ ನಾಯಕಿ ನವ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.

ಸುಲಿಗೆ, ಮಾನಸಿಕ ಹಿಂಸೆ, ಸುಳ್ಳು ಅತ್ಯಾಚಾರ ಕೇಸ್ ದಾಖಋಲಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅವರ ವಿರುದ್ಧ ದೂರು ನೀಡಿದ್ದರು. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

CONGRESS LEADER

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು 15 ದಿನಗಳಿಂದ ಇಂಡಿಯಾದಲ್ಲೇ ಇರಲಿಲ್ಲ. ವಿದೇಶದಿಂದ ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವೀಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ್‌ಐಆರ್ ಆಗಿರುವ ಬಗ್ಗೆ ಮಾಹಿತಿಯಿಲ್ಲ. ಇಲ್ಲಿವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಹೇಳಿದ್ದಾರೆ.

CONGRESS LEADER 2

ಮೊದಲು ನಾನು ಕಂಪ್ಲೇಟ್ ಕಾಪಿ (ದೂರಿನ ಪ್ರತಿ) ಪಡೆಯುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ? ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನೂ ಪ್ರೇಸ್‌ಮೀಟ್ ಮಾಡಿ ಹೇಳುತ್ತೇನೆ, ಎಲ್ಲರ ಪ್ರಶ್ನೆಗೂ ಉತ್ತರ ಕೊಡ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಚಿಯಾನ್ ವಿಕ್ರಮ್ ರೊಮ್ಯಾನ್ಸ್

CONGRESS LEADER 3

ರಾಜಕುಮಾರ ಟಾಕಳೆ ಹೇಳಿದ್ದೇನು?
ನವ್ಯಶ್ರೀ ಆರ್. ರಾವ್ ವಿರುದ್ಧ ದೂರು ನೀಡಿದ್ದ ರಾಜಕುಮಾರ ಟಾಕಳೆ, ಈ ಹಿಂದೆ ನಾನು ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿ ಕಾರ್ಯನಿರ್ವಹಿಸುವಾಗ ಬೆಂಗಳೂರಿನಲ್ಲಿದ್ದೆ. ಆಗ ನವ್ಯಶ್ರೀ ರಾವ್ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯವಾಗಿದ್ದರು. ಇದಾದ ಬಳಿಕ ಡಿಸೆಂಬರ್ 2020ರಲ್ಲಿ ಸಂದರ್ಭದಲ್ಲಿ ನವ್ಯಶ್ರೀ ಅವರು ಸಾಫ್ಟ್‌ವೇರ್‌ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂತಾ ಪರಿಚಯ ಮಾಡಿಕೊಂಡಿದ್ದರು. ಇದನ್ನೂ ಓದಿ: ಕಸ ಸಾಗಿಸೋ ವಾಹನದ ಮೇಲೆ ಹುಚ್ಚಾಟ – ಸಾಹಸ ಮಾಡಿ ಆಸ್ಪತ್ರೆ ಸೇರಿದ ಯುವಕ

ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‌ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದರು. ಒಂದೂವರೆ ವರ್ಷದ ಪರಿಚಯದಲ್ಲಿ ನಾನು ಬೇರೆಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದೆವು. ಇದಾದ ಬಳಿಕ 2021ರ ಡಿಸಂಬರ್ 24ರಂದು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *