ಅಶ್ಲೀಲ ವೀಡಿಯೋದಲ್ಲಿರುವುದು ಪತ್ನಿ ಎಂದು ಶಂಕಿಸಿ ಕೊಲೆಗೆ ಯತ್ನಿಸಿದ ಪತಿ

Public TV
1 Min Read
POLICE JEEP 1

ಗಾಂಧಿನಗರ: ವ್ಯಕ್ತಿಯೊಬ್ಬ ತಾನು ವೀಕ್ಷಿಸುತ್ತಿದ್ದ ಅಶ್ಲೀಲ ವೀಡಿಯೋದಲ್ಲಿರುವ ಮಹಿಳೆಯನ್ನು (Woman) ತನ್ನ ಪತ್ನಿ ಎಂದು ಶಂಕಿಸಿ ಚೂಪಾದ ವಸ್ತುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗುಜರಾತ್‍ನ ರಾಜ್‍ಕೋಟ್‍ನಲ್ಲಿ (Rajkot) ನಡೆದಿದೆ.

ಹರೇಶ್ ಭೂಪ್ಕರ್ (51) ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ. ಗೀತಾ ಭೂಪ್ಕರ್ (45) ಹಲ್ಲೆಗೊಳಗಾದ ಮಹಿಳೆ. ಈ ವೇಳೆ ದಂಪತಿಯ ಪುತ್ರಿ ತಾಯಿಯ ರಕ್ಷಣೆಗೆ ಬಂದಿದ್ದು, ಅವರು ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

ಮಾರ್ಕೆಟಿಂಗ್ ಉದ್ಯೋಗದಲ್ಲಿರುವ ಆರೋಪಿ ಹರೇಶ್ ಇತ್ತೀಚೆಗೆ ಹೊಸ ಮೊಬೈಲ್ ಖರೀದಿಸಿದ್ದ. ಮೊಬೈಲ್ ಖರೀದಿ ಬಳಿಕ ಅಶ್ಲೀಲ ವೀಡಿಯೋ ವ್ಯಸನಕ್ಕೆ ಅಂಟಿಕೊಂಡಿದ್ದ. ಈ ಹಿಂದೆಯೂ ಗೀತಾ ಅವರ ಮೇಲೆ ತಮ್ಮ ಗೆಳೆಯನೊಂದಿಗೆ ಪೋರ್ನ್ ವೀಡಿಯೊಗಳಲ್ಲಿ ನಟಿಸುತ್ತಿದ್ದಾರೆ ಎಂದು ಆರೋಪಿಸಿ ಜಗಳವಾಡಿದ್ದ. ಇದೇ ವಿಚಾರವಾಗಿ ಮಹಿಳೆ ಕಳೆದ ವಾರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಎಫ್‍ಐಆರ್ ದಾಖಲಿಸುವ ಮೊದಲು ಕುಟುಂಬವು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿತ್ತು.

ಇದೀಗ ಹಲ್ಲೆಯ ಬಳಿಕ ಗೀತಾ ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾನಿಲಯ ಠಾಣೆ ಪೊಲೀಸರು (Police) ಐಪಿಸಿ ಸೆಕ್ಷನ್ 324ರ (ಹಲ್ಲೆ) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗೀತಾ ಮತ್ತು ಅವರ ಮಗಳನ್ನು ಚಿಕಿತ್ಸೆಗಾಗಿ ರಾಜ್‍ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article