– ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ಗುಜರಾತ್ ಸರ್ಕಾರ
ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮೇ 25ರಂದು ಗೇಮಿಂಗ್ ಝೋನ್‌ನಲ್ಲಿ ನಡೆದ ಅಗ್ನಿ ಅವಘಡ (Gaming Zone Fire Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ (Gujarat Govt) ಸೋಮವಾರ 7 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಅಗತ್ಯ ಅನುಮೋದನೆಗಳಿಲ್ಲದೇ ಗೇಮಿಂಗ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸಿದೆ. ಹಾಗಾಗಿ ವಿಶೇಷ ತನಿಖಾ ತಂಡ (SIT) ಸಲ್ಲಿಸಿದ ವರದಿ ಆಧರಿಸಿ 7 ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರನ್ನ ಪತ್ತೆ ಮಾಡಿ ಬಂಧಿಸಲು 17 ತಂಡಗಳನ್ನ ರಚಿಸಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ (Harsh Sanghavi) ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ
Advertisement
Advertisement
ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ಸರ್ಕಾರ:
ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ (Muncipal Corporation) ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿದೆ. ಇದನ್ನೂ ಓದಿ: ಮುಂಬೈ ತಾಜ್ ಹೋಟೆಲ್, ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್ ಪತ್ತೆ!
Advertisement
Advertisement
ಡಿಎನ್‌ಎ ಮೂಲಕ ಗುರುತು ಪತ್ತೆ ಕಾರ್ಯ:
ಅಗ್ನಿ ದುರಂತಕ್ಕೆ ಸಿಕ್ಕಿ ಸಜೀವ ಹೊಂದಿರುವವರ ಗುರುತನ್ನು ಡಿಎನ್‌ಎ ಮೂಲಕ ಪತ್ತೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 7 ಅಪ್ರಾಪ್ತರು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಒಬ್ಬರ ಮೃತದೇಹ ಮಾತ್ರ ನಾಪತ್ತೆಯಾಗಿದ್ದು, ಉಳಿದ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸೋಮವಾರವಾದ ಇಂದು ಟಿಆರ್‌ಪಿ ಗೇಮಿಂಗ್ ಝೋನ್ ಫೈರ್ ಸೈಟ್‌ನಿಂದ ಪತ್ತೆಯಾದ ಕನಿಷ್ಠ 5 ಸುಟ್ಟ ದೇಹಗಳ ಗುರುತುಗಳನ್ನು ಡಿಎನ್‌ಎ ಮೂಲಕ ದೃಢಪಡಿಸಲಾಗಿದೆ. ಉಳಿದ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಮೃತ ದೇಹಗಳ ಗುರುತು ಪತ್ತೆಯಾಗಲಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್