27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

Public TV
2 Min Read
Rajkot Game zone Fire

ಗಾಂಧಿನಗರ: 22 ಮಂದಿ ಸಾವನ್ನಪ್ಪಿದ ಗುಜರಾತ್‌ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್‌ ಸೆಂಟರ್‌ (Rajkot TRP Game Zone Fire) ಬಳಿ ಅಗ್ನಿಶಾಮಕ ನಿರಾಕ್ಷೇಪಣಾ ಪ್ರಮಾಣಪತ್ರ (Fire NOC) ಇರಲಿಲ್ಲ ಎಂಬ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ.

ಟಿಆರ್‌ಪಿ ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್‌ನ ಎರಡು ಅಂತಸ್ತಿನ ಗೇಮಿಂಗ್ ಝೋನ್‌ನಲ್ಲಿ ನಡೆದ ಬೆಂಕಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ತನಿಖೆಯ ವೇಳೆ ಮಾಲೀಕರು ಎನ್‌ಒಸಿಗಾಗಿ ಯಾವುದೇ ಅರ್ಜಿ ಸಲ್ಲಿಸದೇ ಇರುವ ವಿಚಾರ ತಿಳಿದು ಬಂದಿದೆ.

ಅಗ್ನಿಶಾಮಕ ಎನ್‌ಒಸಿಗಾಗಿ ಟಿಆರ್‌ಪಿ ಅರ್ಜಿ ಸಲ್ಲಿಸಿಲ್ಲ ಎಂದು ರಾಜ್‌ಕೋಟ್‌ನ ಉಪ ಮುನ್ಸಿಪಲ್ ಕಮಿಷನರ್ ಸ್ವಪ್ನಿಲ್ ಖರೆ ಹೇಳಿದ್ದಾರೆ. ನಾವು ಗೇಮಿಂಗ್ ವಲಯದ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ನಿರ್ವಾಹಕರು ಅಗ್ನಿಶಾಮಕ ಎನ್‌ಒಸಿಗೆ ಅರ್ಜಿ ಸೇರಿದಂತೆ ಬೇರೆ ಯಾವುದೇ ಕ್ಲಿಯರೆನ್ಸ್‌ಗೆ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದರು.

ಪೊಲೀಸರು ಘಟಕದ ವ್ಯವಸ್ಥಾಪಕ ಮತ್ತು ಸಹ-ಮಾಲೀಕನನ್ನು ಬಂಧಿಸಿದ್ದಾರೆ. ಫೈರ್‌ ಎನ್‌ಒಸಿ ಇಲ್ಲದೇ ಇಷ್ಟು ದೊಡ್ಡ ಗೇಮಿಂಗ್ ಝೋನ್ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ರಾಜ್‌ಕೋಟ್ ಮೇಯರ್ ನಯ್ನಾ ಪೆಧಾಡಿಯಾ ಶನಿವಾರ ಹೇಳಿದ್ದಾರೆ.


ನಿತಿನ್ ಜೈನ್ ಮತ್ತು ಯುವರಾಜ್ ಸಿಂಗ್ ಸೋಲಂಕಿ ಅವರನ್ನು ಬಂಧನ ಮಾಡಲಾಗಿದೆ. ಮೂರನೇ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಗೇಮಿಂಗ್ ವಲಯವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹದು ಎಂದು ಅಧಿಕಾರಿಗಳ ಶಂಕೆ ವ್ಯಕ್ತಪಡಿಸಿದ್ದಾರೆ. ಗೇಮಿಂಗ್‌ ಕೇಂದ್ರವನ್ನು ಶೆಡ್‌ನ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸಾಕಷ್ಟು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಬಿಸಿಯಿಂದಾಗಿ ವಿದ್ಯುತ್ ವೈರಿಂಗ್ ಲೋಡ್ ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಶಾರ್ಟ್-ಸರ್ಕ್ಯೂಟ್‌ಗೆ ಕಾರಣವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನನ್ನು ವ್ಯಕ್ತಪಡಿಸಿದ್ದಾರೆ.

 

Share This Article