ಚಿಕ್ಕಬಳ್ಳಾಪುರ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ (Rajiv Gandhi) ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M. C Sudhakar) ಹೇಳಿದ್ದಾರೆ.
ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ (BJP- Congress) ಪಕ್ಷಗಳು ಪರ-ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ನಾವೆಲ್ಲರೂ ಹಿಂದುಗಳು ಇದು ಜ್ಯಾತ್ಯಾತೀತ ರಾಷ್ಟ್ರ ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಸಹಮತ ಇದೆ ಎಂದಿದ್ದಾರೆ.
Advertisement
Advertisement
ನಾವೆಲ್ಲ ನಮ್ಮ ಜಾತಿ ನಮ್ಮ ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರೋರು. ನನ್ನ ಕೊರಳಲ್ಲಿ ವೆಂಕಟರವಣಸ್ವಾಮಿ ಲಾಕೆಟ್ ಇದೆ, ಅಯೋಧ್ಯೆಯಲ್ಲಿ ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ, ಇದನ್ನ ಬಿಜೆಪಿಯವರು ಮರೆಮಾಚಿದ್ದಾರೆ. ಈ ಸತ್ಯವನ್ನ ಜನರಿಗೆ ತಿಳಿಸಬೇಕು. ರಾಮಮಂದಿರ ಉದ್ಘಾಟನೆ ವಿಚಾರ ಎಲ್ಲರಿಗೂ ಸಂತೋಷ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ: ಪರಮೇಶ್ವರ್
Advertisement
Advertisement
ಅನ್ನಭಾಗ್ಯ ಅಕ್ಕಿ ರಾಮಮಂದಿರ ಮಂತ್ರಾಕ್ಷತೆಗೆ ಬಳಕೆ ಡಿಕೆಶಿ ಹೇಳಿಕೆ ವಿಚಾರವನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು ರಾಮಮಂದಿರ ವಿಚಾರವನ್ನ ಬಿಜೆಪಿಯವರು ರಾಜಕೀಯವಾಗುವ ಬಂಡವಾಳ ಮಾಡಿಕೊಳ್ತಿದ್ದಾರೆ. ಯಾಕೆ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಡಿಕೆಶಿಯವರು ಹಾಗೆ ಹೇಳಿದ್ದಾರೆ ಎಂದರು. ಅವರವರ ಧರ್ಮ ಧರ್ಮದ ಮೇಲೆ ಅವರಿಗೆ ನಂಬಿಕೆ ಇದೆ. ರಾಜಕೀಯ ವಾಗಿ ಅನುಕೂಲ ಪಡೆಯಲು ಹೀಗೆ ಮಾಡ್ತಿದ್ದಾರೆ. ಇದು ಕೀಳು ಮಟ್ಟದ ರಾಜಕಾರಣ ಎಂದು ಬಿಜೆಪಿಗೆ ವಿರುದ್ದ ಹರಿಹಾಯ್ದರು.