ವಿವಾದಿತ ವಿಷಯಗಳನ್ನು ನಾಜೂಕಾಗಿ ತೋರಿಸುತ್ತಲೇ ಕನ್ನಡ ಸಿನಿಮಾ ರಂಗದಲ್ಲಿ ಒಂದು ಬ್ರ್ಯಾಂಡ್ ಕ್ರಿಯೇಟ್ ಮಾಡಿರುವ ಎ.ಎಂ.ಆರ್ ರಮೇಶ್ 2017ರಲ್ಲಿ ರಾಜೀವ ಗಾಂಧಿ ಹತ್ಯೆಯ ಕುರಿತಾಗಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆಗ ಈ ಸಿನಿಮಾವನ್ನು ಅವರು ರಾಣಾ ಜತೆ ಮಾಡುವುದಾಗಿಯೂ ಸುದ್ದಿ ಆಗಿತ್ತು. ಭೇಟಿ ಕೂಡ ಮಾಡಿದ್ದರು. ಆ ನಂತರ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಇದೀಗ ಮತ್ತೆ ಆ ಸಿನಿಮಾಗೆ ಮರುಜೀವ ಬಂದಿದೆ. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ
Advertisement
ರಾಜೀವ ಗಾಂಧಿ ಹತ್ಯೆಯ ಹಿಂದಿರುವ ವ್ಯಕ್ತಿಗಳ ಕುರಿತು ಎ.ಎಂ.ಆರ್ ರಮೇಶ್ ಈಗಾಗಲೇ ‘ಸೈನೆಡ್’ ಹೆಸರಿನಲ್ಲಿ ಚಿತ್ರ ಮಾಡಿದ್ದಾರೆ. ಆ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲೇ ಹೊಸ ಸಂಚಲನ ಸೃಷ್ಟಿ ಮಾಡಿತ್ತು. ಆನಂತರ ವೀರಪ್ಪನ್ ಕುರಿತಾಗಿಯೂ ಅವರೊಂದು ಚಿತ್ರ ಮಾಡಿದ್ದರು. ಅದು ಕೂಡ ಸದ್ದು ಮಾಡಿತ್ತು. ಆದ ಘಟನೆಗಳನ್ನು ಎತ್ತಿಕೊಂಡು, ಅದಕ್ಕೆ ಹೊಸ ರೂಪ ಕೊಡುವ ನಿರ್ದೇಶಕರ ಜಾಣ್ಮೆಗೆ ಎಲ್ಲರೂ ಮೆಚ್ಚಿಕೊಂಡಿದ್ದರು. ಹೀಗಾಗಿ ರಾಜೀವ ಗಾಂಧಿಯ ಹತ್ಯೆಗೆ ಬೇರೆ ದೃಷ್ಟಿ ಕೋನ ಕೊಡುವ ನಿಟ್ಟಿನಲ್ಲಿ ‘ಆಸ್ಪೋಟ’ ಹೆಸರಿನಲ್ಲಿ ಈ ಸಿನಿಮಾ ಮಾಡುವುದಾಗಿ ರಮೇಶ್ ಘೋಷಿಸಿದ್ದರು. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
Advertisement
Advertisement
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಾಣಾ ಪ್ರಮುಖ ಪಾತ್ರ ನಿರ್ವಹಿಸಬೇಕಿತ್ತು. ಮತ್ತು ಈ ಸಿನಿಮಾಗೆ ಅವರು ಕೂಡ ಹಣ ಹೂಡಬೇಕಿತ್ತು. ಈಗ ಅದೆಲ್ಲವೂ ಬದಲಾಗಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿನಿಮಾದಲ್ಲಿ ರಾಣಾ ಇಲ್ಲ. ಅವರು ಹಣವನ್ನೂ ಹಾಕುತ್ತಿಲ್ಲ. ಬದಲಾಗಿ ಎ.ಎಂ.ಆರ್ ರಮೇಶ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಮುಂದಿನ ತಿಂಗಳಿಂದ ಶೂಟಿಂಗ್ ಗೂ ಕೂಡ ಪ್ಲ್ಯಾನ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ
Advertisement
ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾದರೂ, ರಾಜೀವ ಗಾಂಧಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಎ.ಎಂ.ಆರ್ ರಮೇಶ್ ಬಿಟ್ಟು ಕೊಟ್ಟಿಲ್ಲ. ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿರುವ ರಮೇಶ್, ‘ಪಾತ್ರಗಳ ಆಯ್ಕೆ ನಡೆಯುತ್ತಿದೆ. ಯಾರು, ಯಾವ ಪಾತ್ರವನ್ನು ಮಾಡಿದರೆ ಸರಿ ಇರುತ್ತೆ ಎನ್ನುವ ಕುರಿತು ಮಾತುಕತೆ ಆಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ. ಹತ್ತು ದಿನದ ಒಳಗೆ ಒಂದಷ್ಟು ಕ್ಲ್ಯಾರಿಟಿ ಸಿಗಬಹುದು. ಇದೊಂದು ಪ್ಯಾನ್ ಇಂಡಿಯಾ ಮಾದರಿಯ ಸಿನಿಮಾವಾಗಿದ್ದರಿಂದ, ಬೇರೆ ಬೇರೆ ಕಲಾವಿದರೂ ಈ ಸಿನಿಮಾದಲ್ಲಿ ಇರಲಿದ್ದಾರೆ’ ಎಂದರು.