ತಮಿಳು ನಾಡಿನ ಹೆಸರಾಂತ ನಟ ರಜನಿಕಾಂತ್ (Rajinikanth) ಅವರ ಪತ್ನಿ ಲತಾ (Lata) ಅವರಿಗೆ 2024 ಜನವರಿ 6ರ ಒಳಗೆ ಖುದ್ದಾಗಿ ಕೋರ್ಟಿ (Court)ಗೆ ಹಾಜರಾಗಬೇಕು ಎಂದು ಬೆಂಗಳೂರಿನ (Bangalore) 1ನೇ ಎಸಿಎಂಎಂ ನ್ಯಾಯಾಲಯ ತಿಳಿಸಿತ್ತು. ಅದರಂತೆ ಇಂದು ಖುದ್ದಾಗಿ ಲತಾ ಅವರು ಬೆಂಗಳೂರಿನ ಕೋರ್ಟಿಗೆ ಹಾಜರಾಗಿದ್ದರು.
Advertisement
ಲತಾ ಅವರ ಮೇಲಿರೋದು ಜಾಮೀನು ರಹಿತ ಪ್ರಕರಣ ಆಗಿದ್ದರಿಂದ ಖುದ್ದಾಗಿ ಹಾಜರಾಗಬೇಕೆಂದು ವಕೀಲರು ಮನವಿ ಮಾಡಿದ್ದರು. ಅವರ ಮನವಿಯಂತೆ ಲತಾ ಹಾಜರಾದರು. ಜೊತೆಗೆ ಜಾಮೀನು ನೀಡುವಂತೆ ಲತಾ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಮಾನ್ಯ ನ್ಯಾಯಾಲಯ ಷರತ್ತು ಬದ್ದ ಜಾಮೀನು (Bail) ಮಂಜೂರು ಮಾಡಿದೆ. ಎರಡು ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಿದ್ದಾರೆ ನ್ಯಾಯಮೂರ್ತಿ ಆನಂದ್ ಕರಿಯಮ್ಮನವರ್.
Advertisement
Advertisement
ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲತಾ ಅವರು ಮೇಲೆ ಐಪಿಸಿ 463 ಅಡಿ ಕೇಸ್ ದಾಖಲಾಗಿತ್ತು. ಕೊಚಾಡಿಯನ್ ಬಿಡುಗಡೆಗೆ ಸಂಬಂಧಿಸಿದಂತೆ ಎರಡು ಕಂಪೆನಿಗಳ ಜೊತೆ ಒಪ್ಪಂದವಾಗಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು. ಸಿನಿಮಾ ಲಾಸ್ ಆದ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡುವಲ್ಲಿ ಲತಾ ವಿಫಲರಾಗಿದ್ದಾರೆ ಎಂದು ದೂರು ದಾಖಲಾಗಿತ್ತು.
Advertisement
ಚಿತ್ರಕ್ಕೆ ನಷ್ಟವಾದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2015ರ ಮೇ 30ರಂದು ಎಫ್.ಐ.ಆರ್ ದಾಖಲಾಗಿತ್ತು. ಹಾಗಾಗಿ ಕೋರ್ಟ್ ಖುದ್ದು ಹಾಜರಾಗಲು ಆದೇಶ ನೀಡಿತ್ತು. ಕೋರ್ಟಿಗೆ ಲತಾ ಅವರು ಬರೋದು ಅನಿವಾರ್ಯವಾಗಿತ್ತು. ಹಾಗಾಗಿ ಖುದ್ದಾಗಿಯೇ ಅವರು ಹಾಜರಾಗಿದ್ದರು.