ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ

Public TV
1 Min Read
rajinikanth lokesh kanagaraj

ಜನಿಕಾಂತ್ (Rajinikanth) ಮತ್ತು ಲೋಕೇಶ್ ಕನಗರಾಜ್ (Lokesh Kanagaraj) ಇಬ್ಬರೂ ಮಧ್ಯ ಯಾವುದೂ ಸರಿ ಇಲ್ಲ ಎನ್ನುವ ಮಾತು ಹರಿದಾಡುತ್ತಿತ್ತು.  ರಜನಿ ಜೈಲರ್ ಸಕ್ಸಸ್ ಬೆನ್ನಲ್ಲೇ ಅದು ಜೋರಾಗಿತ್ತು. ಲೋಕೇಶ್ ಕನಗರಾಜ್ ಅವರು ವಿಜಯ್ ನಟನೆಯ  ಲಿಯೋ ಸಿನಿಮಾದ ನಿರ್ದೇಶಕರಾಗಿದ್ದ ಕಾರಣಕ್ಕೆ ರಜನಿ ಮತ್ತು ದಳಪತಿ ವಿಜಯ್ ಅಭಿಮಾನಿಗಳ ಮಧ್ಯ ಸ್ಟಾರ್ ವಾರ್ ಕೂಡ ಶುರುವಾಗಿತ್ತು. ಹಾಗಾಗಿ ರಜನಿ ಸಿನಿಮಾಗೆ ಲೋಕೇಶ್ ನಿರ್ದೇಶಕರಾಗುವುದು ಅನುಮಾನ ಎಂದು ಹೇಳಲಾಗಿತ್ತು.

Jailer Rajinikanth

ಈ ಎಲ್ಲ ಸುದ್ದಿಗೂ ಟಕ್ಕರ್ ಕೊಡುವಂತಹ ವರ್ತಮಾನವೊಂದು ಬಂದಿದ್ದು, ರಜನಿ ಅವರ 171ನೇ ಸಿನಿಮಾಗೆ ಲೋಕೇಶ್ ಕನಗರಾಜ್ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಜೈಲರ್ ಚಿತ್ರದ ನಿರ್ಮಾಪಕರೇ ನಿರ್ಮಾಣ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಈ ಸಿನಿಮಾದ ಅನೌನ್ಸ್ ಕೂಡ ಆಗಿದೆ. ಸದ್ಯಕ್ಕೆ ಚಿತ್ರಕ್ಕೆ ‘ತಲೈವರ 171’ ಎಂದು ಟೈಟಲ್ ಇಡಲಾಗಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಮತ್ತಷ್ಟು ಮಾಹಿತಿಯನ್ನು ನೀಡಲಿದೆ. ಇದನ್ನೂ ಓದಿ:ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

rajinikanth with vijay

ವಿಕ್ರಮ್ ಸಿನಿಮಾದ ಯಶಸ್ಸಿನ ನಂತರ ಲೋಕೇಶ್, ಲಿಯೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಲಿಯೋ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಅದರ ಸದ್ದು ಜೋರಾಗಿದೆ. ಸಿನಿಮಾ ರಿಲೀಸ್ ಆಗಲು ಇನ್ನೂ 40 ದಿನಗಳು ಬಾಕಿ ಇರುವಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು 24 ಗಂಟೆಗಳಲ್ಲಿ ಮಾರಾಟವಾಗಿ ದಾಖಲೆ ಬರೆದಿವೆ.

 

ಲೀಯೋ ಮತ್ತು ಜೈಲರ್ ಸಿನಿಮಾವನ್ನು ಹೋಲಿಕೆ ಮಾಡಿ, ಬಾಕ್ಸ್ ಆಫೀಸ್ ಗೆಲುವಿನ ಬಗ್ಗೆ ಚರ್ಚೆ ಶುರುವಾಗಿದೆ. ಜೈಲರ್ ಗಿಂತಲೂ ಹೆಚ್ಚು ಹಣವನ್ನು ಲಿಯೋ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ರಜನಿ ಮತ್ತು ಲೋಕೇಶ್ ಜೋಡಿಯನ್ನು ಈ ಚರ್ಚೆಯಲ್ಲಿ ಎಳೆತರಲಾಗಿತ್ತು.

Web Stories

Share This Article