ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರ ಪುತ್ರಿಯಾದ ಸೌಂದರ್ಯಾ ಶೀಘ್ರವೇ ಮದುವೆಯಾಗಲಿದ್ದಾರೆ. ಉದ್ಯಮಿ, ನಟ ವಿಶಾಖನ್ ವನಗಮುಡಿ ಜೊತೆ ಕೆಲ ದಿನಗಳ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, 2019ರ ಜನವರಿಯಲ್ಲಿ ಇಬ್ಬರ ಮದುವೆ ನಡೆಯುವ ಸಾಧ್ಯತೆಯಿದೆ.
ಈ ಹಿಂದೆ 2010ರಲ್ಲಿ ಸೌಂದರ್ಯಾ ಉದ್ಯಮಿ ಅಶ್ವಿನ್ ಅವರನ್ನು ವರಿಸಿದ್ದರು. ಈ ದಂಪತಿಗೆ ಗಂಡು ಮಗು ಜನಿಸಿದ್ದು `ವೇದ್’ ಎಂದು ಹೆಸರನ್ನಿಟ್ಟಿದ್ದರು. ದಂಪತಿ ಮಧ್ಯೆ ಹೊಂದಾಣಿಕೆಯಾಗದ ಕಾರಣ 2017 ರಲ್ಲಿ ವಿಚ್ಛೇದನ ಪಡೆದಿದ್ದರು.
ವಿಶಾಖನ್ ಪತ್ರಿಕಾ ಸಂಪಾದಕಿಯಾಗಿದ್ದ ಕನಿಕಾ ಅವರನ್ನು ಈ ಹಿಂದೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನ ಸರಿ ಹೋಗದ ಕಾರಣ ಅವರು ವಿಚ್ಛೇದನ ಪಡೆದಿದ್ದರು. ಪ್ರಸಿದ್ಧ ಉದ್ಯಮಿ ವನಂಗಮುಡಿ ಅವರ ಪುತ್ರರಾಗಿರುವ ವಿಶಾಖನ್ ಔಷಧಿ ವ್ಯವಹಾರವನ್ನು ನಡೆಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ `ವಂಜಗರ್ ಉಗಾಗಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ವಿಶಾಖನ್ ನಟಿಸಿದ್ದರು.
ಸೌಂದರ್ಯಾ ಮತ್ತು ಅಶ್ವಿನ್ 2010ರ ಸೆಪ್ಟೆಂಬರ್ 3 ರಂದು ಮದುವೆಯಾಗಿದ್ದರು. 2017ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ಬಳಿಕ ಪೋಷಕರ ಜೊತೆ ಸೌಂದರ್ಯಾ ವಾಸವಾಗಿದ್ದರು.
ಅಭಿಮಾನಿಗಳು ಈ ಹಿಂದೆ ವಿಚ್ಛೇದನ ಕುರಿತಂತೆ ಪ್ರಶ್ನೆ ಕೇಳಿದ್ದಕ್ಕೆ ಸೌಂದರ್ಯಾ, ನನ್ನ ಮದುವೆ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಸುದ್ದಿಗಳು ಸತ್ಯವಾಗಿದೆ. ಕೆಲ ವರ್ಷಗಳಿಂದ ನಾವಿಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದೇವೆ. ವಿಚ್ಛೇದನ ವಿಚಾರ ಪ್ರಕ್ರಿಯೆಯಲ್ಲಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು. ಸೌಂದರ್ಯಾ ತಂದೆ ರಜನಿಕಾಂತ್ ಅವರಿಗಾಗಿ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews