ಕಳೆದ ತಿಂಗಳಷ್ಟೇ ರಜನಿಕಾಂತ್ (Rajinikanth) ಮೊದಲ ಪುತ್ರಿ ಐಶ್ವರ್ಯ (Aishwarya) ರಜನಿಕಾಂತ್ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ (Police) ದೂರು ನೀಡಿದ್ದರು. ಪೊಲೀಸರು ತತಕ್ಷಣವೇ ಕಾರ್ಯಾಚರಣೆ ನಡೆಸಿ, ಕಳ್ಳರನ್ನು ಹಿಡಿಯುವಲ್ಲಿ ಯಶಸ್ಸಿ ಆಗಿದ್ದರು. ಇದೀಗ ರಜನಿ ಎರಡನೇ ಪುತ್ರಿ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
Advertisement
ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ (Soundarya) ಸದ್ಯ ಚೆನ್ನೈನ ತೇನಾಂಪೇಟೆ (Tenampet) ಪೊಲೀಸ್ ಠಾಣೆ ಮೆಟ್ಟಿಲೇರಿದು ತಮ್ಮ ಐಷಾರಾಮಿ ಕಾರಿನ ಕೀ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಏಪ್ರಿಲ್ 22 ರಂದು ತಮ್ಮ ದುಬಾರಿ ಕಾರಿನ ಕೀ ಕಳೆದು ಹೋಗಿದ್ದು, ಅದನ್ನು ಹುಡುಕಿಕೊಡುವಂತೆ ದೂರು (Complaint) ನೀಡಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
Advertisement
Advertisement
ಏಪ್ರಿಲ್ 22 ರಂದು ಅವರು ಕಾಲೇಜೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಕಾರ್ಯಕ್ರಮಕ್ಕೆ ರೇಂಜ್ ರೋವರ್ ಕಾರು ತಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಪೌಚ್ ನಲ್ಲಿಟ್ಟಿದ್ದ ಕಾರು ಕೀ ಕಾಣೆಯಾಗಿದ್ದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಗೆ ದೂರು ನೀಡಿ ಕೀ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
Advertisement
ಇದೇ ಸ್ಟೇಶನ್ ನಲ್ಲೇ ಈ ಹಿಂದೆ ಐಶ್ವರ್ಯ ರಜನಿಕಾಂತ್ ಕೂಡ ತಮ್ಮ ಮನೆಯಲ್ಲಿ ಕಳ್ಳತನಾದ ಕುರಿತು ದೂರು ನೀಡಿದ್ದರು. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ತಂಗಿಯೂ ಅದೇ ಸ್ಟೇಶನ್ ಮೆಟ್ಟಿಲು ಏರಿದ್ದಾರೆ.