ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swampy Mutt)ಭೇಟಿ ನೀಡಿದ್ದಾರೆ. ಜೈಲರ್ ಸಕ್ಸಸ್ ಬಳಿಕ ರಾಘವೇಂದ್ರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಜೈಲರ್’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?
ರಜನಿಕಾಂತ್ ಅವರು ದೇವರನ್ನು ನಂಬುವ ಆರಾಧಿಸುವ ವ್ಯಕ್ತಿ. ಜೈಲರ್ (Jailer) ರಿಲೀಸ್ ಸಂದರ್ಭದಲ್ಲಿ ಹಲವು ದೇವಸ್ಥಾನಗಳಿಗೆ ತಲೈವಾ ಭೇಟಿ ನೀಡಿದ್ದರು. ಈಗ ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಇಂದು (ಆಗಸ್ಟ್ 29) ಬೆಳಗ್ಗೆ 10:15ರ ವೇಳೆಗೆ ಬಂದು ತಲೈವಾ ಅರ್ಚನೆ ಮಾಡಿಸಿದ್ದಾರೆ. ಈ ಬಗ್ಗೆ ಹಿರಿಯ ವ್ಯವಸ್ಥಾಪಕರಾದ ವೆಂಕಣ್ಣಾಚಾರ್ ಮಾಹಿತಿ ನೀಡಿದ್ದಾರೆ.
ಪ್ರತಿಬಾರಿ ಬೆಂಗಳೂರಿಗೆ ಬಂದಾಗ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ಸಲ ಬಂದಾಗಲೂ ಸರ್ಪ್ರೈಸ್ ವಿಸಿಟ್ ಮಾಡುತ್ತಾರೆ. ಮಠಕ್ಕೆ ಬಂದಾಗ 10 ನಿಮಿಷ ಪ್ರಾರ್ಥನೆ ಮಾಡ್ತಾರೆ. ರಜನಿಕಾಂತ್ ಅವರು ತುಂಬಾ ಸರಳಜೀವಿ, ಅಹಂಕಾರ ಇಲ್ಲದ ವ್ಯಕ್ತಿಯಾಗಿದ್ದಾರೆ. ಅವರು ಭೇಟಿ ನೀಡಿದ್ದು, ಖುಷಿಯಾಗಿದೆ ಎಂದು ದೇವಾಲಯದ ವ್ಯವಸ್ಥಾಪಕರು ಮಾತನಾಡಿದ್ದಾರೆ. ಇದಷ್ಟೇ ಅಲ್ಲ, ಬೆಂಗಳೂರಿನ(Bengaluru) ಜಯನಗರದ ಡಿಪೋಗೆ ತಲೈವಾ ಭೇಟಿ ನೀಡಿ ಕಂಡೆಕ್ಟರ್, ಚಾಲಕರ ಜೊತೆ 10 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಆಗಸ್ಟ್ 10ರಂದು ತೆರೆ ಕಂಡ ‘ಜೈಲರ್’ (Jailer) ಸಿನಿಮಾ, 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಸ್ತುತ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಅತಿಥಿ ರೋಲ್‌ನಲ್ಲಿ ನಟಿಸುವ ಮೂಲಕ ಮೋಡಿ ಮಾಡಿದ್ದಾರೆ.