ಚೆನ್ನೈ: ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವಿನ ರಾಜಕೀಯ ಗುದ್ದಾಟವನ್ನು ಬಿಜೆಪಿ ಎನ್‍ಕ್ಯಾಶ್ ಮಾಡಿಕೊಳ್ಳಲು ಮುಂದಾದಂತೆ ಕಾಣುತ್ತಿದ್ದು, ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಗಾಳ ಹಾಕಿದೆ.
ಪಕ್ಷಕ್ಕೆ ಸೇರ್ಪಡೆಯಾದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನಿಮ್ಮನ್ನು ಬಿಂಬಿಸುತ್ತೇವೆ ಎಂದು ಬಿಜೆಪಿ ನಾಯಕರು ರಜನಿಕಾಂತ್ ಅವರಲ್ಲಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
Advertisement
ಆರ್‍ಎಸ್‍ಎಸ್ ಒಲವುಳ್ಳ, ಸ್ವದೇಶಿ ಜಾಗರಣ್ ಮಂಚ್ ಸಹ ಸಂಚಾಲಕ ಗುರುಮೂರ್ತಿ ರಜನಿಕಾಂತ್ ಅವರನ್ನು ಭೇಟಿ ಮಾಡಿ ಹೊಸ ಪಕ್ಷವನ್ನು ಕಟ್ಟುವಂತೆ ಸಲಹೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಕೂಡಾ ರಜನಿಕಾಂತ್ ರಾಜಕೀಯಕ್ಕೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ.
Advertisement
ಈ ನಡುವೆ ರಜನಿಕಾಂತ್ ರಾಜಕೀಯ ಎಂಟ್ರಿಗೆ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜಿನಿಕಾಂತ್ ರಾಜಕೀಯಕ್ಕೆ ಬರೋದು ಬೇಡ ಅಂತ ಸಲಹೆ ನೀಡಿದ್ದಾರೆ.
Advertisement
ರಜನಿಕಾಂತ್ ಸಹೋದರ ಸತ್ಯನಾರಾಯಣ ರಾವ್ ಪ್ರತಿಕ್ರಿಯಿಸಿ, ರಜನಿ ರಾಜಕೀಯಕ್ಕೆ ಬರಲು ಈಗ ಕಾಲ ಕೂಡಿಬಂದಿದೆ. ತಮಿಳುನಾಡು ರಾಜಕೀಯದಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಅವರು ನೋಡಲಿದ್ದಾರೆ ಎಂದು ಹೇಳಿದ್ದಾರೆ.
Advertisement
ಒಂದ್ವೇಳೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿಯಾದ್ರೆ ತಮಿಳುನಾಡಲ್ಲಿ ಸರ್ಕಾರ ಛಿದ್ರವಾಗಿ ರಾಷ್ಟ್ರಪತಿ ಆಡಳಿತ ಬಂದ್ರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಶುಕ್ರವಾರ ಸಂಜೆ ಗುರುಮೂರ್ತಿ,ನಾನು ಕೇಳಿದ್ದಕ್ಕೆ ರಜನಿಕಾಂತ್ ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಸುಳ್ಳು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
A totally false news is circulating that Rajnikanth is joining politics on my asking. How ridiculous for the media to carry such false news!
— S Gurumurthy (@sgurumurthy) February 10, 2017