ತಮಿಳು ಚಿತ್ರರಂಗದಲ್ಲಿ (Kollywood) ನಿರ್ದೇಶಕಿಯಾಗಿ ಛಾಪು ಮೂಡಿಸುತ್ತಿರುವ ಐಶ್ವರ್ಯಾ ರಜನಿಕಾಂತ್ (Aishwarya Rajanikanth) ಹೊಸ ಸಿನಿಮಾದ ನಿರ್ದೇಶನದತ್ತ ಬ್ಯುಸಿಯಾಗಿದ್ದಾರೆ. ಮಗಳ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನ ರಜನಿಕಾಂತ್ (Rajanikanth) ಪಡೆದಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Advertisement
ಚಿತ್ರರಂಗದಲ್ಲಿ ಗಾಯಕಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಐಶ್ವರ್ಯ ಗುರುತಿಕೊಂಡಿದ್ದಾರೆ. ಈಗಾಗಲೇ ತ್ರಿ, ವೈ ರಾಜ ವೈ, ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. `ಲಾಲ್ ಸಲಾಮ್’ (Lal Salam) ಸಿನಿಮಾಗೆ ಐಶ್ವರ್ಯ (Aishwarya) ಡೈರೆಕ್ಷನ್ (Direction) ಮಾಡ್ತಿದ್ದಾರೆ. ಈಗ ಕಾಲಿವುಡ್ ಅಂಗಳದಲ್ಲಿ ತಲೈವಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
Advertisement
Advertisement
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಗಳು ಐಶ್ವರ್ಯಾ ನಿರ್ದೇಶನದ ಚಿತ್ರ `ಲಾಲ್ ಸಲಾಮ್’ನಲ್ಲಿ ನಟಿಸಲು 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ತಲೈವಾ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. 7 ದಿನಗಳ ಶೂಟಿಂಗ್‌ನಲ್ಲಿ ತಲೈವಾ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್
Advertisement
ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ `ಲಾಲ್ ಸಲಾಮ್’ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಜನಿಕಾಂತ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾ ಎ.ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k