ರಜನಿಕಾಂತ್ ಮತ್ತು ಉಪೇಂದ್ರ ಕಾಂಬಿನೇಷನ್ ನ ಕೂಲಿ ಸಿನಿಮಾದ ಶೂಟಿಂಗ್ ನೆಡೀತಾ ಇದೆ. ಈ ನಡುವೆ ಶಾಕ್ ನೀಡುವಂತಹ ಸುದ್ದಿ ಹೊರ ಬಿದ್ದಿದೆ. ಚಿತ್ರದ ಪ್ರಮುಖ ದೃಶ್ಯವನ್ನೇ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಈ ನಡೆಗೆ ನಿರ್ದೇಶಕ ಲೋಕೇಶ್ ಕನಗರಾಜು (Lokesh Kanagaraju) ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ತಂಡದ ಶ್ರಮ ಮತ್ತು ಹಣವನ್ನು ಹೀಗೆ ಹಾಳು ಮಾಡಬೇಡಿ ಎಂದಿದ್ದಾರೆ.
- Advertisement -
ಕೂಲಿ ಸ್ಪೆಷಲ್ ಏನು?
- Advertisement -
ಬಹುನಿರೀಕ್ಷಿತ ‘ಕೂಲಿ‘ (Coolie) ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಹೈಪ್ ಕ್ರಿಯೆಟ್ ಮಾಡ್ತಿದೆ. ರಜನಿಕಾಂತ್ (Rajanikanth) ಜೊತೆ ಉಪೇಂದ್ರ ನಟಿಸುವ ಬಗ್ಗೆ ಅಫಿಷಿಯಲ್ ಅನೌನ್ಸ್‌ಮೆಂಟ್ ಸಿಕ್ಕ ಬೆನ್ನಲ್ಲೇ ಈಗ ಮತ್ತೊಂದು ಕ್ರೆಜಿ ಅಪ್ಡೇಟ್ ಹೊರಬಿದ್ದಿದೆ. 30 ವರ್ಷಗಳ ನಂತರ ತಲೈವಾ ಮತ್ತು ಆಮೀರ್ ಖಾನ್ (Aamir Khan) ಕೂಲಿ ಚಿತ್ರಕ್ಕಾಗಿ ಒಂದಾಗ್ತಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
- Advertisement -
- Advertisement -
1995ರಲ್ಲಿ ‘ಆತಂಕ್ ಹಿ ಆತಂಕ್‘ ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಆಮೀರ್ ಜೊತೆಯಾಗಿ ನಟಿಸಿದ್ದರು. ಈಗ ಹೊಸ ಪ್ರಾಜೆಕ್ಟ್ ಕೂಲಿ ಚಿತ್ರಕ್ಕಾಗಿ ತಲೈವಾ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಸ್ಪೆಷಲ್ ರೋಲ್ನಲ್ಲಿ ನಟಿಸ್ತಾರೆ ಎನ್ನಲಾಗಿದೆ. ಇದು ಜಸ್ಟ್ ಗಾಳಿ ಸುದ್ದಿನಾ ಅಥವಾ ರಿಯಲ್ ಸುದ್ದಿನಾ ಎಂಬುದರ ಕುರಿತು ಚಿತ್ರತಂಡವೇ ತಿಳಿಸಬೇಕಿದೆ.
ಆದರೆ ಆಮೀರ್ ಖಾನ್ರನ್ನು ಡೈರೆಕ್ಟರ್ ಲೋಕೇಶ್ ಕನಕರಾಜ್ ಟೀಮ್ ಸಂಪರ್ಕಿಸಿದೆ ಎನ್ನಲಾಗಿದೆ. ಪಾತ್ರದ ಬಗ್ಗೆ ಕೇಳಿ ನಟ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಇನ್ನೂ ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಈ ಸುದ್ದಿ ನಿಜವಾಗಲಿ ಮತ್ತೊಮ್ಮೆ ಇಬ್ಬರೂ ಒಟ್ಟಿಗೆ ನೋಡುವ ಭಾಗ್ಯ ನಮಗೆ ಸಿಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
‘ಕೂಲಿ‘ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್ (Shruti Haasan), ಉಪೇಂದ್ರ (Upendra) ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.