ನೆಚ್ಚಿನ ನಟ ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳು ಮತ್ತು ಆತ್ಮೀಯರಿಗೆ ಸೂಪರ್‌ಸ್ಟಾರ್ ರಜನಿಕಾಂತ್ (RajiniKanth) ಕೃತಜ್ಞತೆ ಸಲ್ಲಿಸಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ನಾನು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನನ್ನ ಎಲ್ಲಾ ರಾಜಕೀಯ ಮಿತ್ರರಿಗೆ, ನನ್ನ ಎಲ್ಲಾ ಚಿತ್ರರಂಗದ ಗೆಳೆಯರಿಗೆ, ನನ್ನ ಎಲ್ಲಾ ಹಿತೈಷಿಗಳಿಗೆ, ಪತ್ರಿಕಾ ಮತ್ತು ಮಾಧ್ಯಮದವರಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನನ್ನು ಪ್ರೀತಿಸುವ, ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ವೃತ್ತ’ ಸಿನಿಮಾಗೆ ಪ್ರಸೆಂಟ್ ಮಾಡಲು ಬಂದ ನೀನಾಸಂ ಸತೀಶ್
???????? pic.twitter.com/E0efF64ju5
— Rajinikanth (@rajinikanth) October 4, 2024
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ, ಪ್ರೀತಿಯ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಹೃತ್ಪೂರ್ವಕ ಧನ್ಯವಾದಗಳು. ಅಮಿತಾಬ್ ಬಚ್ಚನ್ ಅವರ ಪ್ರೀತಿ, ಕಾಳಜಿಗೆ ನನ್ನ ಹೃದಯ ಸ್ಪರ್ಶಿಸಿದೆ ಎಂದು ತಲೈವಾ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಅನಾರೋಗ್ಯದ ಕಾರಣ ರಜನಿಕಾಂತ್ ಅವರನ್ನು ಸೆ.30 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟ್ರಾನ್ಸ್‌ಕ್ಯಾಥೆಟರ್ ವಿಧಾನವನ್ನು ಬಳಸಿ ಚಿಕಿತ್ಸೆ ನೀಡಲಾಯಿತು. ಇದನ್ನೂ ಓದಿ: ಅ.7ಕ್ಕೆ ಭೈರತಿ ರಣಗಲ್ ಚಿತ್ರದ ‘ಕಾವಲಿಗ’ ಲಿರಿಕಲ್ ಸಾಂಗ್
ರಜನಿಕಾಂತ್ ಕೊನೆಯದಾಗಿ ಕಾಣಿಸಿಕೊಂಡಿದ್ದು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ್ದ ಲಾಲ್ ಸಲಾಮ್ ಸಿನಿಮಾದಲ್ಲಿ. ಇದರಲ್ಲಿ ತಲೈವಾ ಅತಿಥಿ ಪಾತ್ರ ಮಾಡಿದ್ದರು. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದರು.
ರಜನಿಕಾಂತ್ ಮುಂದಿನ ಬಹುನಿರೀಕ್ಷಿತ ಚಿತ್ರ ‘ಕೂಲಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿ ರಜನಿಕಾಂತ್ ಆಕ್ಷನ್-ಆಧಾರಿತ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಬೆಂಬಲ ನೀಡಿದೆ. ಇದನ್ನೂ ಓದಿ: ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ ಸಾಂಗ್ ರಿಲೀಸ್