ಸ್ನೇಹಿತ ಬಿಎಂಟಿಸಿ ಬಸ್ ಡ್ರೈವರ್​​​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್

Public TV
2 Min Read
RAJINIKANTH

ನವದೆಹಲಿ: ತಮಿಳು ಸ್ಟಾರ್ ನಟ ರಜನಿಕಾಂತ್ ಸೋಮವಾರ ತಾನು ಸ್ವೀಕರಿಸಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು, ಸಿನಿಮಾ ಕ್ಷೇತ್ರಕ್ಕೆ ಬರಲು ತನ್ನನ್ನು ಪ್ರೇರೇಪಿಸಿದ್ದ ಸ್ನೇಹಿತ ಬಸ್  ಡ್ರೈವರ್​​​ಗೆ ಅರ್ಪಿಸುವ ಮೂಲಕ ಗಮನ ಸೆಳೆದಿದ್ದಾರೆ.

ತನ್ನ ಮೊದಲ ಸಿನಿಮಾ `ಅಪೂರ್ವ ರಾಗಂಗಳ್’ ನಿರ್ದೇಶಕ ದಿವಂಗತ ಕೆ.ಬಾಲಚಂದರ್, ಸಿನಿಮಾರಂಗಕ್ಕೆ ಪ್ರವೇಶಿಸಲು ನೆರವಾದ ಸಹೋದರ ಸತ್ಯನಾರಾಯಣರಾವ್ ಹಾಗೂ ಎಲ್ಲ ನಿರ್ದೇಶಕರು, ನಿರ್ಮಾಕರು, ಥಿಯೇಟರ್ ಮಾಲೀಕರು, ತಂತ್ರಜ್ಞರು, ಅಭಿಮಾನಿಗಳಿಗೂ ಪ್ರಶಸ್ತಿ ಅರ್ಪಿಸಿ ರಜನಿಕಾಂತ್ ಕೃತಜ್ಞತೆ ಮೆರೆದಿದ್ದಾರೆ. ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ನಟ ರಜನಿಕಾಂತ್

ರಜನಿಕಾಂತ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಕಥೆಯೇ ಒಂದು ರೋಚಕ. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಅವರು ಮುಂದಿನ ಚಿತ್ರರಂಗದಲ್ಲಿ ಕೋಟಿ ಕೋಟಿ ಸಂಭಾವನೆಯೊಂದಿಗೆ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆಯುವ ಮಟ್ಟಕ್ಕೆ ಬೆಳೆದಿದ್ದು ಸಾಧನೆಯೇ ಸರಿ. ತಾನು ಆ ಮಟ್ಟಕ್ಕೆ ಬೆಳೆಯಲು ಕಾರಣರಾದ ವ್ಯಕ್ತಿಗೆ ರಜನಿಕಾಂತ್ ತಮ್ಮ ಜೀವನದ ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ಅರ್ಪಿಸಿ ಧನ್ಯತೆ ಮೆರೆದಿದ್ದಾರೆ.

1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಮೂಲ ಹೆಸರು ಶಿವಾಜಿರಾವ್ ಗಾಯಕ್‍ವಾಡ್. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ರಜನಿಕಾಂತ್ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ನಂತರ ರಾಮಕೃಷ್ಣ ಮಿಷನ್ ಶಾಖೆಯಾದ ವಿವೇಕಾನಂದ ಬಾಲಕ ಸಂಘದಲ್ಲಿ ವ್ಯಾಸಾಂಗ ಮಾಡಿದರು. ಇಲ್ಲಿ ವೇದಗಳು, ಭಾರತೀಯ ಸಂಸ್ಕøತಿ ಇತಿಹಾಸವನ್ನು ಅಧ್ಯಯನ ಮಾಡುತ್ತ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.

ಒಮ್ಮೆ ಏಕಲವ್ಯ ನಾಟಕದಲ್ಲಿ ಏಕಲವ್ಯನ ಸ್ನೇಹಿತನ ಪಾತ್ರದ ಅಭಿನಯಕ್ಕೆ ರಜನಿಕಾಂತ್ ಅಭಿನಯಕ್ಕೆ ವರಕವಿ ದ.ರಾ.ಬೇಂದ್ರೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರಿಂದ ಪುಳಕಿತರಾಗಿ ಅಭಿನಯದ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ನಂತರ ಅವರು ಬಸ್ ಕಂಡಕ್ಟರ್ ಆಗಿ ಬೆಂಗಳೂರಿನಲ್ಲಿ ಕೆಲಸ ಆರಂಭಿಸುತ್ತಾರೆ.

ಅಭಿನಯದಲ್ಲಿ ರಜನಿಕಾಂತ್‍ಗೆ ಇರುವ ಪ್ರತಿಭೆಯನ್ನು ಗುರುತಿಸಿದ ಸ್ನೇಹಿತನೂ ಆದ ಬಸ್ ಚಾಲಕ ರಾಜ್ ಬಹದ್ದೂರ್, ‘ನೀನು ಸಿನಿಮಾ ಕ್ಷೇತ್ರಕ್ಕೆ ಹೋಗು. ಉತ್ತಮ ಸಾಧನೆ ಮಾಡಬಹುದು’ ಎಂದು ಸಲಹೆ ನೀಡುತ್ತಾರೆ. ಸ್ನೇಹಿತನ ಸಲಹೆಯಂತೆ ರಜನಿಕಾಂತ್ ಸಿನಿಮಾ ರಂಗಕ್ಕೆ ಬರಲು ಆಸಕ್ತಿ ತೋರುತ್ತಾರೆ. ಇವರಿಗೆ ಬೆನ್ನೆಲುಬಾಗಿ ಅಣ್ಣ ಸತ್ಯನಾರಾಯಣ ರಾವ್ ಗಾಯಕ್‍ವಾಡ್ ಕೂಡ ನಿಲ್ಲುತ್ತಾರೆ. ಇದನ್ನೂ ಓದಿ: ಈ ಸೋಮವಾರ ತಲೈವಾಗೆ ಡಬ್ಬಲ್ ಖುಷಿ

RAJINIKANTH medium

ಆಕಸ್ಮಿಕವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಜನಿಕಾಂತ್ ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಷ್ಟೆ ಅಲ್ಲದೇ ಭಾರತೀಯ ಚಿತ್ರರಂಗದ ಜೀವಮಾನ ಸಾಧನೆಗಾಗಿ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *